ಜೈಲಿನಲ್ಲಿರೋ ದರ್ಶನ್​ಗೆ ಒಂದು ನ್ಯಾಯ ಇತರ ಬಂಧಿಗಳಿಗೊಂದು ನ್ಯಾಯ?

ವಾರದಲ್ಲಿ ಎರಡು ದಿನ ಜೈಲು ಬಂಧಿ ತನ್ನ ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ಭೇಟಿ ಮಾಡಬಹುದು. ಅಲ್ಲದೆ ವಿಡೀಯೋ ಕಾನ್ಪರೆನ್ಸ್ ಮುಖಾಂತರವೂ ಜೈಲು ಬಂಧಿಗಳು ವಾರದಲ್ಲಿ ಎರಡು ಬಾರಿ ಕುಟುಂಬಸ್ಥರು ಅಥವಾ ಸ್ನೇಹಿತರ ಜೊತೆ ಮಾತನಾಡಲು ಅವಕಾಶ ಇದೆ. ಆದರೆ ದರ್ಶನ್ ವಿಚಾರದಲ್ಲಿ ಇದ್ಯಾವುದೂ ಲೆಕ್ಕಕ್ಕೇ ಇಲ್ಲ.

ಜೈಲಿನಲ್ಲಿರೋ ದರ್ಶನ್​ಗೆ ಒಂದು ನ್ಯಾಯ ಇತರ ಬಂಧಿಗಳಿಗೊಂದು ನ್ಯಾಯ?
ದರ್ಶನ್
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 03, 2024 | 11:40 AM

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಅವರ ಗೆಳತಿ ಪವಿತ್ರಾ ಗೌಡ ಅವರು ಎ1 ಆರೋಪಿ ಆದರೆ, ದರ್ಶನ್ ಎ2 ಆರೋಪಿ ಆಗಿದ್ದಾರೆ. ಇದರ ಜೊತೆಗೆ ಹಲವರು ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಮಧ್ಯೆ ದರ್ಶನ್ ಅವರಿಗಾಗಿ ಜೈಲಿನ ನಿಯಮಗಳನ್ನು ತೂರಲಾಯಿತೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಕಾರಾಗೃಹ ಕಾಯ್ದೆ 1894 ಸೆಕ್ಷನ್ 56 ಅಡಿಯಲ್ಲಿ ಓರ್ವ ಜೈಲು ಬಂಧಿಯು ವಾರದಲ್ಲಿ ಒಮ್ಮೆ ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ಭೇಟಿ ಮಾಡಬಹುದು. ಕಾರಾಗೃಹ ಕಾಯ್ದೆ 1894 ಸೆಕ್ಷನ್ 57 ಅಡಿಯಲ್ಲಿ ಜೈಲಿನ ಸೂಪರಿಂಡೆಂಟ್ ವಿಶೇಷ ಹಾಗೂ ಅವಶ್ಯಕ ಸಂದರ್ಭದಲ್ಲಿ ಹೆಚ್ಚಿನ ಬಾರಿ ಭೇಟಿಗೆ ಅವಕಾಶ ನೀಡಬಹುದು. ಕಾರಾಗೃಹ ಕಾಯ್ದೆ 1894 ಸೆಕ್ಷನ್ 58 ಅಡಿಯಲ್ಲಿ ಜೈಲು ಬಂಧಿ ಪತ್ರ ಬರೆಯಲು, ಪತ್ರ ಸ್ವೀಕರಿಸಲು ಅನುಮತಿ ಹೊಂದಿರುತ್ತಾರೆ. ರಜಾ ದಿನಗಳಲ್ಲಿ ಯಾರಿಗೂ ಭೇಟಿಗೆ ಅವಕಾಶ ಇರುವುದಿಲ್ಲ.

ವಾರದಲ್ಲಿ ಎರಡು ದಿನ ಜೈಲು ಬಂಧಿ ತನ್ನ ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ಭೇಟಿ ಮಾಡಬಹುದು. ಅಲ್ಲದೆ ವಿಡೀಯೋ ಕಾನ್ಪರೆನ್ಸ್ ಮುಖಾಂತರವೂ ಜೈಲು ಬಂಧಿಗಳು ವಾರದಲ್ಲಿ ಎರಡು ಬಾರಿ ಕುಟುಂಬಸ್ಥರು ಅಥವಾ ಸ್ನೇಹಿತರ ಜೊತೆ ಮಾತನಾಡಲು ಅವಕಾಶ ಇದೆ. ಆದರೆ ದರ್ಶನ್ ವಿಚಾರದಲ್ಲಿ ಇದ್ಯಾವುದೂ ಲೆಕ್ಕಕ್ಕೇ ಇಲ್ಲ. ಜೈಲು ಸೇರಿ ಕೆಲವೇ ದಿನಗಳಲ್ಲಿ ಹಲವರ ಭೇಟಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ತಾಯಿ ಮೀನಾ ತೂಗುದೀಪ, ಸೋದರ ದಿನಕರ್, ನಟ ವಿನೋದ್ ಪ್ರಭಾಕರ್, ರಕ್ಷಿತಾ ಪ್ರೇಮ್, ಪ್ರೇಮ್ ಭೇಟಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಜೈಲಿನಿಂದ ಹಗಲು-ರಾತ್ರಿ ನಿರ್ಮಾಪಕರಿಗೆ ಕರೆ ಮಾಡಿ ಜಾಮೀನಿಗೆ ಬೇಡಿಕೆ ಇಡುತ್ತಿರುವ ದರ್ಶನ್

ದರ್ಶನ್ ಅವರನ್ನು ಭೇಟಿ ಮಾಡಲು ಜೈಲು ಅಧಿಕಾರಿಗಳು ಹೀಗೆ ಅವಕಾಶ ನೀಡುತ್ತಿರುವುದು ಎಷ್ಟು ಸರಿ ಅನ್ನೋದು ಅನೇಕರ ಪ್ರಶ್ನೆ. ದರ್ಶನ್​ಗೆ ಒಂದು ನ್ಯಾಯ, ಉಳಿದ ಬಂಧಿಗಳಿಗೆ ಒಂದು ನ್ಯಾಯ ಏಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಸದ್ಯ ಜೈಲು ಅಧಿಕಾರಿಗಳ ನಡೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಮಂಗಳೂರು-ಮೂಡಬಿದರೆ ರಸ್ತೆಯಲ್ಲಿ ಗುಡ್ಡಕುಸಿತವುಂಟಾಗುವ ಭೀತಿ!
ಮಂಗಳೂರು-ಮೂಡಬಿದರೆ ರಸ್ತೆಯಲ್ಲಿ ಗುಡ್ಡಕುಸಿತವುಂಟಾಗುವ ಭೀತಿ!
ಕರಾವಳಿ ಪ್ರಾಂತ್ಯದಲ್ಲಿ ನಿಲ್ಲದ ಮಳೆ ಅಬ್ಬರ, ಅರಬ್ಬೀ ಸಮುದ್ರ ಪ್ರಕ್ಷುಬ್ದ
ಕರಾವಳಿ ಪ್ರಾಂತ್ಯದಲ್ಲಿ ನಿಲ್ಲದ ಮಳೆ ಅಬ್ಬರ, ಅರಬ್ಬೀ ಸಮುದ್ರ ಪ್ರಕ್ಷುಬ್ದ
‘ದರ್ಶನ್ ಆರೋಪಿ , ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ‘
‘ದರ್ಶನ್ ಆರೋಪಿ , ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ‘
ಪ್ರೈಮ್ ಡೇ ವಿಶೇಷ ಆಫರ್ ಸೇಲ್ ದಿನಾಂಕ ಪ್ರಕಟಿಸಿದ ಅಮೆಜಾನ್
ಪ್ರೈಮ್ ಡೇ ವಿಶೇಷ ಆಫರ್ ಸೇಲ್ ದಿನಾಂಕ ಪ್ರಕಟಿಸಿದ ಅಮೆಜಾನ್
ಆಷಾಢ ಮಾಸದಲ್ಲಿ ಮೆಹಂದಿ ಹಚ್ಚಿಕೊಳ್ಳುವುದರ ಮಹತ್ವ ತಿಳಿದುಕೊಳ್ಳಿ
ಆಷಾಢ ಮಾಸದಲ್ಲಿ ಮೆಹಂದಿ ಹಚ್ಚಿಕೊಳ್ಳುವುದರ ಮಹತ್ವ ತಿಳಿದುಕೊಳ್ಳಿ
ಆಷಾಢ ಅಮಾವಾಸ್ಯೆ ದಿನ ಲಕ್ಷ್ಮಿ ದರ್ಶನ, ಗೋವು ಸ್ಪರ್ಶದಿಂದ ಒಳಿತಾಗಲಿದೆ
ಆಷಾಢ ಅಮಾವಾಸ್ಯೆ ದಿನ ಲಕ್ಷ್ಮಿ ದರ್ಶನ, ಗೋವು ಸ್ಪರ್ಶದಿಂದ ಒಳಿತಾಗಲಿದೆ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್