Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಪ್ರೀತಿಯ ರಾಮು’ ಬಿಡುಗಡೆ ಆದಾಗ ಎರಡು ವಿಷಯಕ್ಕೆ ದರ್ಶನ್​ಗೆ ಬೇಜಾರಾಗಿತ್ತು

‘ನಮ್ಮ ಪ್ರೀತಿಯ ರಾಮು’ ಬಿಡುಗಡೆ ಆದಾಗ ಎರಡು ವಿಷಯಕ್ಕೆ ದರ್ಶನ್​ಗೆ ಬೇಜಾರಾಗಿತ್ತು

ಮಂಜುನಾಥ ಸಿ.
|

Updated on:Feb 13, 2025 | 11:53 AM

Darshan Thoougdeepa: ದರ್ಶನ್ ನಟನೆಯ ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಇಂದು (ಫೆಬ್ರವರಿ 13) ಮರು ಬಿಡುಗಡೆ ಆಗುತ್ತಿದೆ. 2003 ರಲ್ಲಿ ಈ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಆದಾಗ ದರ್ಶನ್​ಗೆ ಎರಡು ವಿಷಯಕ್ಕೆ ಬಹಳ ಬೇಸರ ಆಗಿತ್ತಂತೆ. ಈ ಬಗ್ಗೆ ಸಿನಿಮಾದ ಆಗಿನ ನಿರ್ಮಾಪಕರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ಇಲ್ಲಿದೆ ವಿಡಿಯೋ...

ದರ್ಶನ್ ನಟನೆಯ ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಇಂದು (ಫೆಬ್ರವರಿ 13) ಮರು ಬಿಡುಗಡೆ ಆಗುತ್ತಿದೆ. 2003 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ದರ್ಶನ್ ವೃತ್ತಿ ಜೀವನದಲ್ಲಿ ಅತ್ಯಂತ ಸವಾಲಿನ ಪಾತ್ರವಾಗಿತ್ತು. ಆದರೆ ಈ ಸಿನಿಮಾ ಬಿಡುಗಡೆ ಆದಾಗ ದರ್ಶನ್ ಬಹಳ ಅಪ್​ಸೆಟ್ ಆಗಿದ್ದರಂತೆ. ಅಷ್ಟು ಕಷ್ಟ ಪಟ್ಟು ಮಾಡಿದ ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಬೆಂಗಳೂರಿನಲ್ಲಿ 100 ದಿನ ಓಡಲಿಲ್ಲ ಅದು ದರ್ಶನ್​ಗೆ ಬೇಸರ ತಂದಿತ್ತು. ಅದರ ಜೊತೆಗೆ ವೃತ್ತಿ ಜೀವನದ ಅತ್ಯುತ್ತಮ ನಟನೆ ನೀಡಿದ ಹೊರತಾಗಿಯೂ ಈ ಸಿನಿಮಾಕ್ಕೆ ದರ್ಶನ್​ಗೆ ಪ್ರಶಸ್ತಿ ಬರಲಿಲ್ಲ. ನಿರ್ಮಾಣ ಸಂಸ್ಥೆಯವರು ಈ ಸಿನಿಮಾವನ್ನು ಪ್ರಶಸ್ತಿ ಪರಿಗಣನೆಗೆ ಕಳಿಸಿರಲೇ ಇಲ್ಲವಂತೆ ಈ ಬಗ್ಗೆಯೂ ದರ್ಶನ್​ಗೆ ಬೇಸರ ಆಗಿತ್ತು. ಈಗ ಎರಡು ದಶಕಗಳ ಬಳಿಕ ಸಿನಿಮಾ ಮತ್ತೆ ಮರು ಬಿಡುಗಡೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 13, 2025 11:35 AM