Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB New Captain: RCB ತಂಡದ ಹೊಸ ನಾಯಕ ರಜತ್ ಪಾಟಿದಾರ್

RCB New Captain: RCB ತಂಡದ ಹೊಸ ನಾಯಕ ರಜತ್ ಪಾಟಿದಾರ್

ಝಾಹಿರ್ ಯೂಸುಫ್
|

Updated on: Feb 13, 2025 | 12:16 PM

RCB New Captain: 2021 ರಿಂದ ಆರ್​ಸಿಬಿ ತಂಡದ ಭಾಗವಾಗಿರುವ ರಜತ್ ಪಾಟಿದಾರ್ 27 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 24 ಇನಿಂಗ್ಸ್ ಆಡಿರುವ ಅವರು 1 ಶತಕ ಹಾಗೂ 7 ಅರ್ಧಶತಕಗಳೊಂದಿಗೆ ಒಟ್ಟು 799 ರನ್ ಕಲೆಹಾಕಿದ್ದಾರೆ. ಆದರೆ ಈ ಬಾರಿ ನಾಯಕತ್ವದೊಂದಿಗೆ ರಜತ್ ಪಾಟಿದಾರ್ ಆರ್​ಸಿಬಿ ಪರ ಕಣಕ್ಕಿಳಿಯಲಿರುವುದು ವಿಶೇಷ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕರಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಅದರಂತೆ ಐಪಿಎಲ್ ಸೀಸನ್-18 ರಲ್ಲಿ ಪಾಟಿದಾರ್ ಸಾರಥ್ಯದಲ್ಲಿ ಆರ್​ಸಿಬಿ ತಂಡ ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫಾಫ್ ಡುಪ್ಲೆಸಿಸ್ ಮುನ್ನಡೆಸಿದ್ದರು. ಆದರೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಡುಪ್ಲೆಸಿಸ್ ಅವರನ್ನು ಆರ್​ಸಿಬಿ ಬಿಡುಗಡೆ ಮಾಡಿತ್ತು. ಅಲ್ಲದೆ ಇದೀಗ ಫಾಫ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ.

ಹೀಗಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ನಾಯಕನನ್ನು ಪರಿಚಯಿಸಲು ನಿರ್ಧರಿಸಿದೆ. ಅದರಂತೆ 31 ವರ್ಷದ ರಜತ್ ಪಾಟಿದಾರ್​ಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗಿದೆ. ಪಾಟಿದಾರ್ ದೇಶೀಯ ಅಂಗಳದಲ್ಲಿ ಮಧ್ಯ ಪ್ರದೇಶ್ ತಂಡವನ್ನು ಮುನ್ನಡೆಸಿ ಅನುಭವ ಹೊಂದಿದ್ದಾರೆ. ಈ ಅನುಭವವನ್ನು ಪರಿಗಣಿಸಿ ರಜತ್​ಗೆ ನಾಯಕತ್ವ ನೀಡಲು ಆರ್​ಸಿಬಿ ಫ್ರಾಂಚೈಸಿ ನಿರ್ಧರಿಸಿದೆ.

2021 ರಿಂದ ಆರ್​ಸಿಬಿ ತಂಡದ ಭಾಗವಾಗಿರುವ ರಜತ್ ಪಾಟಿದಾರ್ 27 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 24 ಇನಿಂಗ್ಸ್ ಆಡಿರುವ ಅವರು 1 ಶತಕ ಹಾಗೂ 7 ಅರ್ಧಶತಕಗಳೊಂದಿಗೆ ಒಟ್ಟು 799 ರನ್ ಕಲೆಹಾಕಿದ್ದಾರೆ. ಆದರೆ ಈ ಬಾರಿ ನಾಯಕತ್ವದೊಂದಿಗೆ ರಜತ್ ಪಾಟಿದಾರ್ ಆರ್​ಸಿಬಿ ಪರ ಕಣಕ್ಕಿಳಿಯಲಿರುವುದು ವಿಶೇಷ.