ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ; ಪುಣ್ಯಸ್ನಾನ ಮಾಡಿದ ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಅವರಿಗೆ ಈಗ 65ರ ಪ್ರಾಯ, ಅದರೆ ನೀಟಾಗಿ ಕ್ರಾಪು ಮಾಡಿಸಿಕೊಂಡು ಟೀ ಶರ್ಟ್ ಧರಿಸಿ ಪ್ರಯಾಗ್ ರಾಜ್ ನಲ್ಲಿ ಓಡಾಡುತ್ತಿದ್ದ ಶಾಸಕ 40 ಯುವಕನಂತೆ ಕಾಣುತ್ತಿದ್ದರು. ರಾಜ್ಯ ರಾಜಕೀಯದ ಬಗ್ಗೆ ಮಾತಾಡುವುದಾದರೆ ಅವರು ಬಸನಗೌಡ ಯತ್ನಾಳ್ ಮತ್ತು ಇತರ ಕೆಲ ಬಿಜೆಪಿ ನಾಯಕರೊಂದಿಗೆ ವಕ್ಫ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದಾರೆ.
ಪ್ರಯಾಗ್ರಾಜ್ (ಉತ್ತರ ಪ್ರದೇಶ): ಮಹಾಕುಂಭಮೇಳದಲ್ಲಿ ಕರ್ನಾಟಕದ ಗಣ್ಯರು ಪುಣ್ಯಸ್ನಾನ ಮಾಡುವುದು ಮುಂದುವರಿದಿದೆ. ಗೋಕಾಕ ಬಿಜೆಪಿ ಶಾಸಕ ಮತ್ತು ರಾಜ್ಯ ಬಿಜೆಪಿ ಘಟಕದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ರಮೇಶ್ ಜಾರಕಿಹೊಳಿಯವರು ಸಹ ಪ್ರಯಾಗ್ರಾಜ್ ತೆರಳಿ ಪುಣ್ಯಸ್ನಾನ ಮಾಡಿದರು. ಅವರೊಂದಿಗೆ ಕೆಲ ಸ್ನೇಹಿತರು ಸಹ ಇದ್ದರು. ಮೊನ್ನೆಯಷ್ಟೇ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪತ್ನಿ ಸಮೇತರಾಗಿ ಪ್ರಯಾಗ್ರಾಜ್ಗೆ ಅಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬಿಜೆಪಿಗೆ ಬರದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದರೆ ? ಯತ್ನಾಳ್
Published on: Feb 13, 2025 12:34 PM
Latest Videos