ದೂರು ದಾಖಲಿಸಲು ಐದು ದಿನ ಯಾಕೆ ಕಾದೆ ಅಂತ ಅಂಧಾಭಿಮಾನಿಗಳು ಅರ್ಥಮಾಡಿಕೊಳ್ಳಬೇಕು: ಪ್ರಥಮ್ ನಟ

ಅರುಣ್​ ಕುಮಾರ್​ ಬೆಳ್ಳಿ

Updated on: Jul 29, 2025 | 6:17 PM

ಒಂದು ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಮತ್ತೊಂದು ದೂರು ದರ್ಶನ್ ವಿರುದ್ಧ ದಾಖಲಾಗೋದು ಬೇಡ ಅಂತ ಐದು ದಿನಗಳವರೆಗೆ ದೂರು ದಾಖಲಿಸಲಿಲ್ಲ, ಬೇರೆಯಾವರಾಗಿದ್ದರೆ ಅವತ್ತೇ ದೂರು ದಾಖಲಿಸಿರುತ್ತಿದ್ದೆ, ಇದನ್ನು ಅಂಧಾಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು, ದರ್ಶನ್ ಅವರಿಗಿರುವಂತೆ ನನಗೂ ಫ್ಯಾಮಿಲಿ ಇದೆ, ಟ್ರೋಲ್ ಮಾಡಿರೋದನ್ನು ನೋಡಿ ನನ್ನ ಫ್ಯಾಮಿಲಿ ಕೂಡ ಹರ್ಟ್ ಆಗುತ್ತದೆ ಎಂದು ಪ್ರಥಮ್ ಹೇಳಿದರು.

ಬೆಂಗಳೂರು, ಜುಲೈ 29: ದರ್ಶನ್ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ದೂರು ಸಲ್ಲಿಸಿದ್ದಾರೆ. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ದರ್ಶನ್ (actor Darshan) ಸೇರಿದಂತೆ ಅವರ ಅಭಿಮಾನಿಗಳ ಮೇಲೆ ದಾಳಿ ನಡೆಸಿದರು. ತನಗೆ ವೆಪನ್ ತೋರಿಸಿದವನು ದರ್ಶನ್ ಜೈಲಲ್ಲಿದ್ದಾಗ ಅವರ ಬ್ಯಾರಕ್ ನಲ್ಲಿದ್ದ ಒಬ್ಬ ಕೈದಿ, ಅದಾದ ಬಳಿಕ ನನ್ನ ವಿರುದ್ಧ ಎರಡು ಸಾವಿರ ಅಕೌಂಟ್ ಗಳಿಂದ ಟ್ರೋಲ್ ಮಾಡಿಸಿದ್ದಾರೆ, ನಾನು ಕಂಪ್ಲೇಂಟ್ ಕೊಡಲು ನಿರ್ಧರಿಸಿದಾಗ ಏನ್ ಕಿತ್ತುಕೊಳ್ತಾನೋ ಕಿತ್ತುಕೊಳ್ಳಲಿ, ಅಂತ ದರ್ಶನ್ ಹೇಳಿದ್ದಾರೆ, ಅವರಿಂದ ನಾನು ಏನು ಕಿತ್ತುಕೊಳ್ಳಲು ಸಾಧ್ಯ? ಅವರು ತಲೆಗೆ ವಿಗ್ ಹಾಕುತ್ತಾರೆ ಅಂತ ಮಾಧ್ಯಮಗಳಲ್ಲಿ ತೋರಿಸಿದ್ದಾರೆ ಎಂದು ಪ್ರಥಮ್ ಹೇಳಿದರು. ದರ್ಶನ್ ಪೊಲೀಸ್ ಕಮೀಷನರ್ ಕಚೇರಿಗೆ ಬಂದು ಹೇಳಿಕೆ ದಾಖಿಲಿಸುವರೆಗೆ ನಾನು ಇಲ್ಲೇ ಆಮರಣಾಂತ ಉಪವಾಸ ಧರಣಿಗೆ ಕೂರೋದಾಗಿ ಪ್ರಥಮ್ ಹೇಳಿದರು.

ಇದನ್ನೂ ಓದಿ:  ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.