AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯ ಮೈಕ್​​ನಿಂದ ಸಂದೇಶ

ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯ ಮೈಕ್​​ನಿಂದ ಸಂದೇಶ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Apr 09, 2026 | 6:01 PM

Share

ಕಾಂಗ್ರೆಸ್ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು (ಏಪ್ರಿಲ್ 09) ಮತದಾನ ನಡೆದಿದ್ದು, ಮತದಾರರು ಸಹ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಓಟ್ ಮಾಡುತ್ತಿದ್ದಾರೆ. ಸಂಜೆ 5ರವರೆಗೆ ದಾವಣಗೆರೆ ದಕ್ಷಿಣದಲ್ಲಿ ಶೇಕಡಾ 63.04% ಮತದಾನವಾಗಿದೆ. ಇನ್ನು ಇದರ ಮಧ್ಯೆ ಮಸೀದಿಯಿಂದ ಮಹತ್ವದ ಸಂದೇಶವೊಂದು ಮೊಳಗಿದೆ.ಯಾರು ಮತದಾನ ಮಾಡಿಲ್ಲವೋ ಅವರು ಹೋಗಿ ಮತದಾನ ಮಾಡಿ ಎಂದು ಮಸೀದಿಯ ಮೈಕ್​​ನಲ್ಲಿ ಸಂದೇಶ ನೀಡಲಾಗಿದೆ.

ದಾವಣಗೆರೆ, (ಏಪ್ರಿಲ್ 09): ಕಾಂಗ್ರೆಸ್ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಚನಾವಣೆ (Davanagere south By Election) ಎದುರಾಗಿದ್ದು, ಇಂದು (ಏಪ್ರಿಲ್ 09) ಮತದಾನ ನಡೆದಿದೆ. ಮತದಾರರು ಸಹ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಓಟ್ ಮಾಡುತ್ತಿದ್ದಾರೆ. ಸಂಜೆ 5ರವರೆಗೆ ದಾವಣಗೆರೆ ದಕ್ಷಿಣದಲ್ಲಿ ಶೇಕಡಾ 63.04% ಮತದಾನವಾಗಿದೆ. ಇನ್ನು ಇದರ ಮಧ್ಯೆ ಮಸೀದಿಯಿಂದ ಮಹತ್ವದ ಸಂದೇಶವೊಂದು ಮೊಳಗಿದೆ.ಯಾರು ಮತದಾನ ಮಾಡಿಲ್ಲವೋ ಅವರು ಹೋಗಿ ಮತದಾನ ಮಾಡಿ ಎಂದು ಮಸೀದಿಯ ಮೈಕ್​​ನಲ್ಲಿ ಸಂದೇಶ ನೀಡಲಾಗಿದೆ. ದಾವಣಗೆರೆಯ ಆಜಾದ್​ನಗರದ ಮಿಲ್ಲತ್ ಕಾಲೇಜು ಬಳಿಯಿರುವ ಮಸೀದಿ ಮೈಕ್ ಮೂಲಕ ಸಂದೇಶ ನೀಡಲಾಗಿದ್ದು, ಸಂಜೆ 6ರವರೆಗೆ ಮತದಾನಕ್ಕೆ ಅವಕಾಶವಿದೆ, ಎಲ್ಲರೂ ಮತದಾನ ಮಾಡಿ. ಮತದಾನ ಮಾಡದವರನ್ನು ಕರೆದುಕೊಂಡು ಹೋಗಿ ವೋಟ್ ಹಾಕಿಸಿ ಎಂದು ಮೈಕ್​ನಲ್ಲಿ ಹೇಳಿರುವುದು ವಿಶೇಷ.

Follow Us