ದಾವಣಗೆರೆ ದಕ್ಷಿಣ ಬೈಎಲೆಕ್ಷನ್​​: ಸಾದಿಕ್ ಪೈಲ್ವಾನ್ ಮನವೊಲಿಸಿದರೂ ಕಾಂಗ್ರೆಸ್​​ಗೆ ತಪ್ಪಲ್ವಾ ಬಂಡಾಯದ ಬಿಸಿ?

Edited By:

Updated on: Mar 27, 2026 | 4:59 PM

ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್ ವಿಚಾರವಾಗಿ ಮುಸ್ಲಿಂ ಸಮುದಾಯದೊಳಗೆ ಅಸಮಾಧಾನ ಭುಗಿಲೆದ್ದಿದೆ. ಆರಂಭದಲ್ಲಿ ಸಾದಿಕ್ ಪೈಲ್ವಾನ್ ಬೆಂಬಲಿಸಿದ್ದ ಆಕಾಂಕ್ಷಿಯೊಬ್ಬರು, ಈಗ ಯುವಕರ ಒತ್ತಡಕ್ಕೆ ಮಣಿದು ಕಣಕ್ಕಿಳಿದಿದ್ದಾರೆ. ಸಮುದಾಯದ ಮತದಾರರು ಒಗ್ಗೂಡಿದ್ದು, ಕಾಂಗ್ರೆಸ್‌ಗೆ ಮತ ಹಾಕದಿರಲು ನಿರ್ಧರಿಸಿದ್ದಾರೆ ಎಂದಿದ್ದಾರೆ. ಇದೀಗ ಪಕ್ಷದ ನಾಯಕರಿಗೆ ಹೊಸ ತಲೆನೋವಾಗಿ ಮಾರ್ಪಟ್ಟಿದೆ.

ದಾವಣಗೆರೆ, ಮಾರ್ಚ್​​ 27: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ಸಿಗದೇ ಇರುವುದು ಆ ಸಮಾಜದ ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಕಣಕ್ಕೆ ಇಳಿಯೋದಾಗಿ ಈ ಹಿಂದೆ ಸಾದಿಕ್ ಪೈಲ್ವಾನ್ ಘೋಷಿಸಿದ್ದ ಕಾರಣ ಅವರಿಗೆ ಸಮುದಾಯದ ಬೆಂಬಲ ವ್ಯಕ್ತವಾಗಿತ್ತು. ಆದರೀಗ  ಆ ನಿರ್ಧಾರದಿಂದ ಅವರು ಹಿಂದೆ ಸರಿಯುತ್ತಿರುವ ಹಿನ್ನೆಲೆ, ಅವರಿಗೆ ಬೆಂಬಲ ಘೋಷಿಸಿದ್ದ ನಾಯಕರು ಯಾವುದೇ ಕಾರಣಕ್ಕೂ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲ್ಲ ಎಂದು ಹೇಳುತ್ತಿರೋದು ಕಾಂಗ್ರೆಸ್​​ಗೆ ಹೊಸ ತಲೆನೋವಾಗುವ ಸಾಧ್ಯತೆ ಇದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Mar 27, 2026 04:56 PM
Follow Us