ಅವಳಿ ಗಂಡು ಶಿಶುಗಳ ಸಾವು: ಮನೆ ಮಂದಿಯ ಅಸಹಾಯಕತೆ, ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದೆ ಸಮಾಜಸೇವಕ

ನಡು ರಾತ್ರಿಯ ಸಮಯದಲ್ಲಿ ಅಂತ್ಯಸಂಸ್ಕಾರ ನಡೆಸಲು ಮಹಿಳೆಯ ಸಂಬಂಧಿಕರಿಗೆ ಅಸಹಾಯಕತೆ ಎದುರಾದಾಗ ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಿಗೆ ಬಂದು, ತಮ್ಮ ಮನೆಯಲ್ಲಿಯೇ ಶೀತಲೀಕೃತ ಶವ ರಕ್ಷಣಾ ಯಂತ್ರದಲ್ಲಿ ಅವಳಿ ಶಿಶುಗಳ ಕಳೇಬರವನ್ನು ಒಂದು ರಾತ್ರಿ ರಕ್ಷಿಸಿಟ್ಟು, ಮರುದಿನ ಬೆಳಿಗ್ಗೆ ಇಂದ್ರಾಳಿಯ ರುದ್ರ ಭೂಮಿಯಲ್ಲಿ ಗೌರಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು.

ಅವಳಿ ಗಂಡು ಶಿಶುಗಳ ಅಂತ್ಯಸಂಸ್ಕಾರ ನಡೆಸಲು, ಮನೆ ಮಂದಿಗೆ ಅಸಹಾಯಕ ಪರಿಸ್ಥಿತಿ ಎದುರಾದಾಗ, ಸಮಾಜಸೇವಕ ನಿತ್ಯಾನಂದ ಒಳಕಾಡುವರು, ನೆರವಿಗೆ ಬಂದು ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದರು. ಬಾಗಲಕೋಟೆಯ ಹುಲಿಗಮ್ಮ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾದ ಹುಲಿಗಮ್ಮ ಅವಳಿ ಗಂಡು ಶಿಶುಗಳಿಗೆ ರವಿವಾರ ಜನ್ಮ ನೀಡಿದಳು.

ಎರಡೂ ಶಿಶುಗಳು ಮೃತಪಟ್ಟವು. ನಡು ರಾತ್ರಿಯ ಸಮಯದಲ್ಲಿ ಅಂತ್ಯಸಂಸ್ಕಾರ ನಡೆಸಲು ಮಹಿಳೆಯ ಸಂಬಂಧಿಕರಿಗೆ ಅಸಹಾಯಕತೆ ಎದುರಾದಾಗ ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಿಗೆ ಬಂದು, ತಮ್ಮ ಮನೆಯಲ್ಲಿಯೇ ಶೀತಲೀಕೃತ ಶವ ರಕ್ಷಣಾ ಯಂತ್ರದಲ್ಲಿ ಅವಳಿ ಶಿಶುಗಳ ಕಳೇಬರವನ್ನು ಒಂದು ರಾತ್ರಿ ರಕ್ಷಿಸಿಟ್ಟು, ಮರುದಿನ ಬೆಳಿಗ್ಗೆ ಇಂದ್ರಾಳಿಯ ರುದ್ರ ಭೂಮಿಯಲ್ಲಿ ಗೌರಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು.

ಪ್ರಜ್ವಲ್ ಅಮೀನ್​, ಉಡುಪಿ

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us