ದುಬಾರಿ ದೀಪಾವಳಿ: ಹೂವು, ಹಣ್ಣು ತರಕಾರಿ ಬೆಲೆ ಏರಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 30, 2024 | 1:01 PM

ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಜೋರಾಗಿದೆ. ಆದರೆ, ಹೂವು, ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಕೆ ಆಗಿದ್ದು, ಗ್ರಾಹಕರು ಶಾಕ್​ ಆಗಿದ್ದಾರೆ. ಈ ಬೆಲೆ ಏರಿಕೆಯಿಂದಾಗಿ ಈ ವರ್ಷದ ದೀಪಾವಳಿ ದುಬಾರಿಯಾಗಲಿದೆ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್​ 30: ಬೆಳಕಿನ ಹಬ್ಬ ದೀಪಾವಳಿಗೆ (Deepavali) ಕ್ಷಣಗಣನೆ ಶುರುವಾಗಿದೆ.  ಇತ್ತ ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಕೆ.ಆರ್.ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಖರೀದಿ ಭರಟೆ ಜೋರಾಗಿದೆ. ಹೂವಿನ ಬೆಲೆ ಬಲು ದುಬಾರಿ ಆಗಿದ್ದು, ಬೆಲೆ ಕೇಳಿಯೇ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಹೂವಿನೊಂದಿಗೆ ಹಣ್ಣು, ತರಕಾರಿ ಕೂಡ ಬೆಲೆಯಲ್ಲಿ ಏರಿಕೆ ಆಗಿದೆ. ಹಾಗಾಗಿ ಗ್ರಾಹಕರು ಇದು ದುಬಾರಿ ದೀಪಾವಳಿ ಎನ್ನುತ್ತಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.  

Follow us on