‘ಟಾಕ್ಸಿಕ್’ ಸೆಟ್​ ಹಾಕಿರುವ ಸ್ಥಳ ಈಗ ಹೇಗಿದೆ? ವಿವರ ನೋಡಿ ವಿಡಿಯೋದೊಂದಿಗೆ

‘ಟಾಕ್ಸಿಕ್’ ಸೆಟ್​ ಹಾಕಿರುವ ಸ್ಥಳ ಈಗ ಹೇಗಿದೆ? ವಿವರ ನೋಡಿ ವಿಡಿಯೋದೊಂದಿಗೆ

ಮಂಜುನಾಥ ಸಿ.
|

Updated on: Oct 30, 2024 | 1:11 PM

Toxic Movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಸಿನಿಮಾದ ಸೆಟ್ ನಿರ್ಮಾಣಕ್ಕೆ ನಿಯಮಬಾಹಿರವಾಗಿ ಮರಗಳನ್ನು ಕಡಿಯಲಾಗಿದೆ ಎಂದು ಅರಣ್ಯ ಇಲಾಖೆ ಆರೋಪ ಮಾಡಿದೆ. ‘ಟಾಕ್ಸಿಕ್’ ಸಿನಿಮಾದ ಸೆಟ್ ಹೇಗಿದೆ? ಇಲ್ಲಿದೆ ವಿಡಿಯೋ

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಸಿನಿಮಾ ಚಿತ್ರೀಕರಣಕ್ಕಾಗಿ ಬೆಂಗಳೂರಿನ ಹೊರವಲಯದಲ್ಲಿರುವ ಎಚ್​ಎಂಟಿಗೆ ಸೇರಿದ ಸ್ಥಳದಲ್ಲಿ ಸೆಟ್ ನಿರ್ಮಾಣ ಮಾಡಲಾಗಿತ್ತು. ಆದರೆ ಸೆಟ್ ನಿರ್ಮಾಣಕ್ಕಾಗಿ ಸಾಕಷ್ಟು ಮರಗಳನ್ನು ಕಡಿಯಲಾಗಿದೆ ಎಂದು ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಆರೋಪ ಮಾಡಿದ್ದು, ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ. ‘ಟಾಕ್ಸಿಕ್’ ಸಿನಿಮಾದ ಸೆಟ್ ಹಾಕಲಾಗಿರುವ ಜಾಗದ ಈಗಿನ ಹಾಗೂ ಹಳೆಯ ಸ್ಯಾಟಲೈಟ್ ಚಿತ್ರಗಳನ್ನು ಸಹ ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ಅಸಲಿಗೆ ಈ ಹಿಂದೆ ಸಹ ಬಿಬಿಎಂಪಿ ಅಧಿಕಾರಿಗಳು ಸಹ ‘ಟಾಕ್ಸಿಕ್’ ಸಿನಿಮಾ ಸೆಟ್ ನಿರ್ಮಾಣವಾಗಿರುವ ಜಾಗಕ್ಕೆ ಭೇಟಿ ತಂಡಕ್ಕೆ ನೊಟೀಸ್ ನೀಡಿದ್ದರು. ಅಂದಹಾಗೆ ‘ಟಾಕ್ಸಿಕ್’ ಸಿನಿಮಾ ಸೆಟ್ ಹಾಕಿರುವ ಜಾಗ ಹೇಗಿದೆ? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ