ದರ್ಶನ್ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರು ಮನೆ ಸ್ವಚ್ಛಗೊಳಿಸುತ್ತಿರುವ ಮನೆಗೆಲಸದವರು
ದರ್ಶನ್ ಗೆ ಬೆನ್ನುನೋವಿನ ಚಿಕಿತ್ಸೆಗಾಗಿ ಜಾಮೀನು ಸಿಕ್ಕಿದೆ. ಹಾಗಾಗಿ, ಅವರ ಮನೆಗೆ ಬಂದರೂ ಒಂದೆರಡು ದಿನಗಳಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲಿದ್ದಾರೆ. ಐದು ತಿಂಗಳಿಂದ ಜೈಲಲ್ಲಿದ್ದ ನಟನಿಗೆ ಚಿಕಿತ್ಸೆ ಅವಧಿಯಲ್ಲಿ ಆಸ್ಪತ್ರೆ ಕೂಡ ಬಂಧಿಖಾನೆಯಾಗಿ ಕಾಣಲಿದೆ. ಅವರು ಶಸ್ತ್ರಚಿಕಿತ್ಸೆಗೊಳಗಾಗುವ ಸಾಧ್ಯತೆ ಇದೆ.
ಬೆಂಗಳೂರು: ಹೈಕೋರ್ಟ್ನಿಂದ ಆರುವಾರ ಅವಧಿಯ ಮಧ್ಯಂತರ ಜಾಮೀನು ಪಡೆದಿರುವ ನಟ ದರ್ಶನ್ ಮನೆಯಲ್ಲಿ ಹಬ್ಬದ ವಾತಾವರಣ ಇಮ್ಮಡಿಸಿದೆ. ನಾಳೆ ದೀಪಾವಳಿ ಹಬ್ಬ ಮತ್ತ್ತು ಇವತ್ತು ದರ್ಶನ್ ಮನೆಗೆ ಬರುತ್ತಿದ್ದಾರೆ. ಅವರನ್ನು ಇವತ್ತೇ ಬಿಡುಗಡೆ ಮಾಡಲಾಗುತ್ತೋ ಅಂತ ಖಚಿತಪಟ್ಟಿಲ್ಲ ಅದರೆ ನಗರದಲ್ಲಿರುವ ಅವರ ಮನೆಯನ್ನು ಸ್ವಚ್ಛಗೊಳಿಸುವ ಕೆಲಸ ಆರಂಭವಾಗಿದೆ. ಮನೆಗೆ ಬರುವ ಮೊದಲು ಅವರು ದೇವಸ್ಥಾನಕ್ಕೆ ಹೋಗಲಿದ್ದಾರಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ಗೆ ಜಾಮೀನು: ನೋವಿನಲ್ಲೂ ಘನತೆ ಮೆರೆದ ರೇಣುಕಾ ಸ್ವಾಮಿ ತಂದೆ
Latest Videos