Reservoir dries up: ತುಂಗಭದ್ರಾ ಜಲಾಶಯದಲ್ಲಿ ನೀರು ತಳ ಕಂಡಿದೆ, ಬಳಕೆಗೆ ಕೇವಲ 2 ಟಿಎಮ್​ಸಿ ಮಾತ್ರ ಲಭ್ಯ

Reservoir dries up: ತುಂಗಭದ್ರಾ ಜಲಾಶಯದಲ್ಲಿ ನೀರು ತಳ ಕಂಡಿದೆ, ಬಳಕೆಗೆ ಕೇವಲ 2 ಟಿಎಮ್​ಸಿ ಮಾತ್ರ ಲಭ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 19, 2023 | 11:49 AM

ಈ ವರ್ಷ ಮಾನ್ಸೂನ್ ವಿಳಂಬಗೊಂಡಿರುವುದರಿಂದ ನದಿ ಮತ್ತು ಜಲಾಶಯದಲ್ಲಿ ನೀರಿಲ್ಲ.

ಬಳ್ಳಾರಿ: ಬೇಸಾಯಕ್ಕೆ ಮಳೆಯನ್ನು ನಂಬಿಕೊಳ್ಳುವ ರೈತರ ಬದುಕು ನಿರಂತರ ಅತಂತ್ರ, ಹೀಗೆ ಹೇಳಲು ಕಾರಣವಿಲ್ಲದಿಲ್ಲ. ಈ ಬಾರಿ ರಾಜ್ಯದಲ್ಲಿ ಮಾನ್ಸೂನ್ (monsoon) ವಿಳಂಬಗೊಂಡಿದೆ. ವಿಡಿಯೋದಲ್ಲಿ ಕಾಣುತ್ತಿರುವ ತುಂಗಭಧ್ರಾ ಜಲಾಶಯವನ್ನು (Tungabhadra) ನೋಡಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು. ಕಳೆದ ವರ್ಷ ಈ ದಿನದಂದು ಜಲಾಶಯದಲ್ಲಿ ನೀರಿನ ಮಟ್ಟ 41 ಟಿಎಮ್ ಸಿ ಇತ್ತು, ಈ ವರ್ಷ ಅದು ತಳಮಟ್ಟ ತಲುಪಿ ಕೇವಲ 4.5 ಟಿಎಮ್ ಸಿ ನೀರು ಮಾತ್ರ ಉಳಿದಿದೆ. ಅದರಲ್ಲಿ 2.5 ಟಿಎಮ್ ಸಿ ನೀರನ್ನು ಡೆಡ್ ಸ್ಟೋರೇಜ್ (dead storage) ಅಂತ ಪರಿಗಣಿಲಾಗುತ್ತದೆ. ಅಂದರೆ, ಅಷ್ಟು ನೀರನ್ನು ಜಲಾಶಯದಲ್ಲಿ ಕಾಯ್ದುಕೊಳ್ಳಲೇಬೇಕು. ಉಳಿದ 2 ಟಿಎಮ್ ಸಿ ನೀರನ್ನು ಕುಡಿಯುವುದಕ್ಕೆ ಉಪಯೋಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ತುಂಗಭಧ್ರಾ ನದಿ ಆಂಧ್ರ ಪ್ರದೇಶ ಸೇರಿದಂತೆ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಜನರ ಜೀವನಾಡಿ. ಆದರೆ ಈ ವರ್ಷ ಮಾನ್ಸೂನ್ ವಿಳಂಬಗೊಂಡಿರುವುದರಿಂದ ನದಿ ಮತ್ತು ಜಲಾಶಯದಲ್ಲಿ ನೀರಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ