ಅಗಲಿದ ಹಿರಿಯ ಕಾಂಗ್ರೆಸ್ ಪಕ್ಷದ ಧುರೀಣ ಜಾಲಪ್ಪನವರ ಮುದ್ದಿನ ಸಾಕುನಾಯಿಯೂ ಮೌನವಾಗಿ ರೋದಿಸುತ್ತಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 18, 2021 | 5:25 PM

ಜಾಲಪ್ಪನವರ ಮುದ್ದಿನ ನಾಯಿಯು ಎರಡು ತಿಂಗಳುಗಳಿಂದ ಅವರನ್ನು ಮಿಸ್ ಮಾಡಿಕೊಳ್ಳುತ್ತಿತ್ತು. ಈಗ ಅದಕ್ಕೆ ಅವರ ಸಾವಿನ ಸುದ್ದಿಯೂ ಗೊತ್ತಾಗಿರಬಹುದು. ಹಾಗಾಗಿ ತನ್ನ ಪ್ರೀತಿಯ ಯಜಮಾನನ್ನು ಇನ್ಯಾವತ್ತೂ ನೋಡಲಾರೆನೆಂಬ ದುಃಖ ಅದರಲ್ಲಿ ಮಡುಗಟ್ಟಿದೆ.

ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಾಗಿದ್ದ ಆರ್ ಎಲ್ ಜಾಲಪ್ಪ ಸುಮಾರು ಒಂದೂವರೆ ತಿಂಗಳು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಸಾವಿನೊಂದಿಗೆ ಹೋರಾಟ ನಡೆಸಿ ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದರು. ಅಗಲಿದ ನಾಯಕನ ಅಂತಿಮ ಸಂಸ್ಕಾರ ಅವರ ಸ್ವಗ್ರಾಮ ದೊಡ್ಡಳ್ಳಾಪುರ ತಾಲ್ಲೂಕಿನಲ್ಲಿರುವ ತೂಬಗೆರೆಯಲ್ಲಿ ನಡೆಯಿತು. ಅವರ ಸಾವು ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಜಾಲಪ್ಪನವರ ಕುಟುಂಬದ ಸದಸ್ಯನಂತಿರುವ ಈ ನಾಯಿ ಸಹ ತನ್ನ ಮಾಲೀಕನನ್ನು ಕಳೆದುಕೊಂಡು ದುಃಖ ಅನುಭವಿಸುತ್ತಿದೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜಾಲಪ್ಪನವರು ಆರೋಗ್ಯವಾಗಿದ್ದಾಗ ಪ್ರತಿದಿನ ಬೆಳಗ್ಗೆ ವಾಕ್ಗೆ ಹೊರಡುವಾಗ ತಮ್ಮ ಮುದ್ದಿನ ನಾಯಿಯನ್ನು ಜೊತೆ ಕರೆದೊಯ್ಯುತ್ತಿದ್ದರಂತೆ. ನಿಮಗೆ ಗೊತ್ತಿರುವ ಹಾಗೆ ಜಾಲಪ್ಪನವರು ಸುಮಾರು ಎರಡು ತಿಂಗಳ ಅವಧಿಯಿಂದ ಅನಾರೋಗ್ಯಪೀಡಿತರಾಗಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗತಿಸಿದ ನಾಯಕರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

ಅದರರ್ಥ, ಅವರ ಮುದ್ದಿನ ನಾಯಿಯು ಎರಡು ತಿಂಗಳುಗಳಿಂದ ಅವರನ್ನು ಮಿಸ್ ಮಾಡಿಕೊಳ್ಳುತ್ತಿತ್ತು. ಈಗ ಅದಕ್ಕೆ ಅವರ ಸಾವಿನ ಸುದ್ದಿಯೂ ಗೊತ್ತಾಗಿರಬಹುದು. ಹಾಗಾಗಿ ತನ್ನ ಪ್ರೀತಿಯ ಯಜಮಾನನ್ನು ಇನ್ಯಾವತ್ತೂ ನೋಡಲಾರೆನೆಂಬ ದುಃಖ ಅದರಲ್ಲಿ ಮಡುಗಟ್ಟಿದೆ. ಅದರ ಮೂಕವೇದನೆ ಎಂಥವರಿಗೂ ಅರ್ಥವಾಗುತ್ತದೆ.

ಸಾಮಾನ್ಯವಾಗಿ ಮನೆಗಳಲ್ಲಿ ಸಾವಿನಂಥ ಘಟನೆ ಸಂಭವಿಸಿದಾಗ ಸಾಕು ನಾಯಿಗಳು ಅನ್ನ ನೀರು ಬಿಟ್ಟು ರೋದಿಸುತ್ತವೆ. ಜಾಲಪ್ಪನವರ ನಾಯಿ ಆಹಾರ ಸೇವಿಸುವುದನ್ನು ಬಿಟ್ಟಿದಿಯೋ ಇಲ್ಲವೋ ಆಂತ ನಮಗೆ ಗೊತ್ತಾಗಿಲ್ಲ ಆದರೆ, ಅದು ಮೂಕವಾಗಿ ರೋದಿಸುತ್ತಿರುವುದು ಮಾತ್ರ ನಮಗೆ ಈ ವಿಡಿಯೋನಲ್ಲಿ ಕಾಣಿಸುತ್ತಿದೆ.

ಇದನ್ನೂ ಓದಿ:   ಕೆಸರುಮಯ ರಸ್ತೆಯಲ್ಲಿ ಪುಟ್ಟ ಬಾಲಕ ಟ್ರ್ಯಾಕ್ಟರ್ ಓಡಿಸುವ ವಿಡಿಯೋವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ; ವಿಡಿಯೋ ವೈರಲ್

Published on: Dec 18, 2021 04:21 PM