Metro Works: ಮೆಟ್ರೋ ಕಾಮಗಾರಿ ವೀಕ್ಷಿಸುವಾಗ ಶೂ ಕಟ್ಟಲು ಬಂದ ಕಾರ್ಮಿಕನನ್ನು ದೂರ ಸರಿಸಿದ ಡಿಕೆ ಶಿವಕುಮಾರ್
ಲಕ್ಕಸಂದ್ರದ ಬಳಿ ನಡೆಯುತ್ತಿರುವ ಸುರಂಗ ಮಾರ್ಗದ ಕಾಮಗಾರಿಯನ್ನು ಶಿವಕುಮಾರ್ ಪರಿಶೀಲಿಸಿದರು.
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ಡೇರಿ ಸರ್ಕಲ್ ನಿಂದ ನಾಗವಾರವರೆಗೆ ನಡೆಯುತ್ತಿರುವ ಸುಮಾರು 21 ಕಿಮೀಗಳಷ್ಟು ಉದ್ದದ ಮೆಟ್ರೋ ಕಾಮಗಾರಿಉ ಪರಿಶೀಲನೆ ನಡೆಸಿದರು. ಶಿವಕುಮಾರ್ ಅವರೊಂದಿಗೆ ಬಿಎಮ್ ಆರ್ ಸಿಎಲ್ ಎಂಡಿ ಅಂಜುಮ್ ಪರ್ವೇಜ್ (Anjum Parvez) ಮತ್ತು ಇತರ ಅಧಿಕಾರಿಗಳನ್ನು ನೋಡಬಹುದು. ಸುರಂಗ ಮಾರ್ಗದ ಕಾಮಗಾರಿ (tunnel works) ವೀಕ್ಷಿಸಲು ಶಿವಕುಮಾರ್ ಭೂಮಿಯನ್ನು ಕೊರೆದ ಸ್ಥಳಕ್ಕೆ ಹೋಗುವಾಗ ಶೂ ಧರಿಸಬೇಕಿತ್ತು. ಒಬ್ಬ ಕಾರ್ಮಿಕ ಶೂ ತಂದು ಅವುಗಳನ್ನು ತೊಡಿಸಲು ಮುಂದಾದಾಗ ಶಿವಕುಮಾರ್ ವ್ಯಕ್ತಿಯನ್ನು ದೂರ ಸರಿಯುವಂತೆ ಹೇಳಿ ತಾವೇ ಶೂ ಕಟ್ಟಿಕೊಳ್ಳುತ್ತಾರೆ. ಲಕ್ಕಸಂದ್ರದ ಬಳಿ ನಡೆಯುತ್ತಿರುವ ಸುರಂಗ ಮಾರ್ಗದ ಕಾಮಗಾರಿಯನ್ನು ಅವರು ಪರಿಶೀಲಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ