ನೆಲಮಂಗಲ: ಆನ್ಲೈನ್ನಲ್ಲೇ ಲಂಚ, ಉಪ ಲೋಕಾಯಕ್ತ ದಾಳಿ ವೇಳೆ ಬಯಲಾಯ್ತು ಅಕ್ರಮ
ಸರ್ಕಾರಿ ಕಚೇರಿಗಳಲ್ಲಿ ಲಂಚ ಪಡೆಯುವುದು, ಭ್ರಷ್ಟಾಚಾರದ ಆರೋಪ ಕೇಳಿಬಂದ ಕಾರಣ ನೆಲಮಂಗಲದ ಹಲವು ಸರ್ಕಾರಿ ಕಚೇರಿಗಳ ಮೇಲೆ ಉಪ ಲೋಕಾಯುಕ್ತ ನ್ಯಾ. ವೀರಪ್ಪ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಅವರೇ ನೀಡಿರುವ ಮಾಹಿತಿ ಇಲ್ಲಿದೆ.
ನೆಲಮಂಗಲ, ಸೆಪ್ಟೆಂಬರ್ 5: ಲೋಕಾಯುಕ್ತ ಕಚೇರಿಗೆ ಅಕ್ರಮದ ಸಾಕಷ್ಟು ದೂರುಗಳು ಬಂದ ಕಾರಣ ನೆಲಮಂಗಲದ ಹಲವು ಕಡೆಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಉಪ ಲೋಕಾಯಕ್ತ ನ್ಯಾ. ವೀರಪ್ಪ ದಾಳಿ ಮಾಡಿ ಪರಿಶೀಲನೆ ನಡೆಸಿದರು. ನಂತರ ‘ಟಿವಿ9’ ಬಳಿ ಮಾತನಾಡಿದ ಅವರು, 14 ಸರ್ಕಾರಿ ಕಚೇರಿಗಳಿಗೆ ಭೇಟಿ ಕೊಟ್ಟಿರುವೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಮಗೆ ಸುಮಾರು ದಾಖಲೆಗಳು ಸಿಕ್ಕಿವೆ. ಅವುಗಳ ಬಗ್ಗೆ ತನಿಖೆ ಮಾಡಲಾಗುತ್ತದೆ. ನೆಲಮಂಗಲ ನಗರಸಭೆ, ತಾಲೂಕು ಕಚೇರಿಯ ಸಿಬ್ಬಂದಿ ಆನ್ಲೈನ್ ಮೂಲಕ ಲಂಚದ ಹಣ ತಗೊಂಡಿದ್ದಾರೆ, ಹಣದ ಮೂಲ ಕೇಳಿದರೆ ಹೇಳುತ್ತಿಲ್ಲ ಎಂದರು.
ಮೊದಲ ಬಾರಿಗೆ ಪೊಲೀಸ್ ಠಾಣೆಗಳಿಗೂ ಬೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇನೆ. ಲಂಚ ತೆಗೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಜನರು ಮುಂದೆ ಬಂದು ಅನ್ಯಾಯವನ್ನು ಖಂಡಿಸಬೇಕು. ಕ್ಯಾನ್ಸರ್ನ ವಾಸಿ ಮಾಡಬಹುದು, ಆದರೆ ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲ ಎನ್ನುವಂತಿದೆ ಪರಿಸ್ಥಿತಿ. ಸರ್ಕಾರದ ಕೆಲಸವನ್ನು ದೇವರ ಕೆಲಸ ಎಂದು ಭಾವಿಸಿ ಜನ ಸಾಮಾನ್ಯರ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ