‘ನನ್ನ ಮಗನಿಗಾದ ನೋವು ದರ್ಶನ್ಗೂ ಆಗಬೇಕು’; ಹಿಡಿಶಾಪ ಹಾಕಿದ ರೇಣುಕಾಸ್ವಾಮಿ ತಂದೆ
ರೇಣುಕಾ ಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೋಟೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಈ ಫೋಟೋ ನೋಡಿದವರ ಕರುಳು ಚುರಕ್ ಎಂದಿದೆ. ಪಟ್ಟಣಗೆರೆ ಶೆಡ್ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ. ಈ ಬೆನ್ನಲ್ಲೇ ರೇಣುಕಾ ಸ್ವಾಮಿ ತಂದೆ ಮಾತನಾಡಿದ್ದಾರೆ.
ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾ ಸ್ವಾಮಿ ಅಂಗಲಾಚುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿದವರ ಕರುಳು ಚುರಕ್ ಎಂದಿದೆ. ಕುಟುಂಬದವರನ್ನು ಈ ಫೋಟೋ ಸಾಕಷ್ಟು ಕಾಡಿದೆ. ಈ ಬಗ್ಗೆ ರೇಣುಕಾ ಸ್ವಾಮಿ ತಂದೆ ಕಾಶೀನಾಥಯ್ಯ ಮಾತನಾಡಿದ್ದಾರೆ. ‘ನನ್ನ ಮಗನ ಯಾತನೆಯನ್ನು ನೋಡಿ ತಡೆದುಕೊಳ್ಳಲಾಗುತ್ತಿಲ್ಲ. ನನ್ನ ಪುತ್ರನಿಗೆ ಆದ ಪರಿಸ್ಥಿತಿ ಆರೋಪಿಗಳಿಗೂ ಆಗಬೇಕು. ಅಲ್ಲಿದ್ದವರಲ್ಲಿ ಒಬ್ಬರಿಗಾದರೂ ಮನುಷ್ಯತ್ವ ಇಲ್ಲವೇ? ನಮ್ಮ ಆರೋಗ್ಯ ದಿನ ಕಳೆದಂತೆ ಕ್ಷೀಣಿಸುತ್ತಿದೆ’ ಎಂದು ಕಾಶೀನಾಥಯ್ಯ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:56 am, Thu, 5 September 24