AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ

ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ

ರಮೇಶ್ ಬಿ. ಜವಳಗೇರಾ
|

Updated on: Feb 15, 2025 | 4:48 PM

Share

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ವಾಲಾಲ್ ಜಯಂತೋತ್ಸವ ಅಂಗವಾಗಿ ಕಬಡ್ಡಿ ಆಯೋಜನೆ ಮಾಡಲಾಗಿತ್ತು. ಕಬಡ್ಡಿಗೆ ಚಾಲನೆ ನೀಡಲು ರೇಡಿಂಗ್ ಗೆ ಹೋಗಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ ಆಯತಪ್ಪಿ ಮುಗ್ಗರಿಸಿ ಬಿದ್ದಿದ್ದಾರೆ. ಘಟನೆಯಲ್ಲಿ ರುದ್ರಪ್ಪ ಲಮಾಣಿ ಅವರ ಕಾಲಿಗೆ ಸ್ವಲ್ಪ ಪೆಟ್ಟಾಗಿದೆ.

ದಾವಣಗೆರೆ, (ಫೆಬ್ರವರಿ 15): ಕಬಡ್ಡಿಯಾಡಲು ಹೋಗಿ ವಿಧಾನ ಸಭೆಯ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ಕಾಲು ಜಾರಿ ಬಿದ್ದಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ವಾಲಾಲ್ ಜಯಂತೋತ್ಸವ ಅಂಗವಾಗಿ ಕಬಡ್ಡಿ ಆಯೋಜನೆ ಮಾಡಲಾಗಿತ್ತು. ಕಬಡ್ಡಿಗೆ ಚಾಲನೆ ನೀಡಲು ರೇಡಿಂಗ್ ಗೆ ಹೋಗಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ ಆಯತಪ್ಪಿ ಮುಗ್ಗರಿಸಿ ಬಿದ್ದಿದ್ದಾರೆ. ಕೂಡಲೇ ಆಟಗಾರರು ಹಾಗೂ ಇಲ್ಲಿದ್ದ ಜನರು ರುದ್ರಪ್ಪ ಲಮಾಣಿ ಮೇಲೆತ್ತಿದರು. ಅದೃಷ್ಟವಶಾತ್ ಗಂಭೀರ ಗಾಯವಾಗಿಲ್ಲ. ಕಾಲಿಗೆ ಸ್ವಲ್ಪ ಮಟ್ಟಿಗೆ  ನೋವಾಗಿದೆ ಎಂದು ತಿಳಿದ್ದುಬಂದಿದ್ದು,

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More