ಥೇಟ್ ಧನಂಜಯ ಹಾಗಿರುವ ಅಣ್ಣ, ಅವನ ತಲೇಲಿ ಕೂದಲು ಇದೆ, ನನ್ನ ತಲೇಲಿ ಇಲ್ಲ ಅಂದರು!
ಧನಂಜಯ ಮತ್ತು ಧನ್ಯತಾರ ಹಾಗೆ ನಿಮ್ಮದೂ ಬಹಳ ಸುಂದರ ಜೋಡಿ ಅಂತ ನಮ್ಮ ಪ್ರತಿನಿಧಿ ಹೇಳಿದಾಗ, ನಟನ ಅತ್ತಿಗೆ ನಾಚಿ ನೀರಾಗುತ್ತಾರೆ ಮತ್ತು ಹಾಗೆ ಹೇಳಿದಾಗ ಬಹಳ ಖುಷಿಯಾಗುತ್ತೆ ಎಂದು ಹೇಳುತ್ತಾರೆ. ಧನ್ಯತಾ ಬಹಳ ಚಂದದ ಹುಡುಗಿ ಮತ್ತು ಅದಕ್ಕೂ ಮಿಗಿಲಾಗಿ ಡಾಕ್ಟ್ರಮ್ಮ ಬೇರೆ, ಆಕೆ ನಮಗೆಲ್ಲ ಅಮ್ಮನೇ ಎಂದು ನಗುತ್ತಾ ಅವರು ಹೇಳುತ್ತಾರೆ. ಧನಂಜಯನ್ನು ಫ್ಯಾಮಿಲಿ ಕ್ಲಬ್ಗೆ ವೆಲ್ಕಂ ಮಾಡಿದ್ದೀವಿ, ಇನ್ನು ಮೇಲೆ ಅವನಿಗೆ ಎಲ್ಲ ಅನುಭವವಾಗುತ್ತದೆ ಅಂತ ಅಣ್ಣ ಮಾರ್ಮಿಕವಾಗಿ ಹೇಳಿದರು.
ಮೈಸೂರು: ಚಿತ್ರನಟ ಡಾಲಿ ಧನಂಜಯ್ ಮದುವೆಯಲ್ಲಿ ಅವರ ಅಣ್ಣ ಮತ್ತು ಅತ್ತಿಗೆ ತುಂಬಾ ಖುಷಿಯಿಂದ ಓಡಾಡುತ್ತಿದ್ದಾರೆ. ತನ್ನ ಸಹೋದರ ಕೊನೆಗೂ ಮದುವೆಯಾಗುತ್ತಿದ್ದಾನಲ್ಲ ಅಂತ ಅಣ್ಣ ಖುಷಿಪಡುತ್ತಿದ್ದರೆ ವಾರಗಿತ್ತಿಯಾಗಿ ಒಬ್ಬ ಡಾಕ್ಟ್ರಮ್ಮ ಬರ್ತಿದ್ದಾಳೆ ಅಂತ ಅತ್ತಿಗೆ ಸಂಭ್ರಮಿಸುತ್ತಿದ್ದಾರೆ. ಧನಂಜಯ್ ಮತ್ತು ಅವರ ಅಣ್ಣ ನೋಡಲು ಥೇಟ್ ಒಂದೇ ಥರ ಇದ್ದಾರೆ, ಅಣ್ಣನೇ ಅಂಗೀಕರಿಸುವ ಹಾಗೆ ಕೂದಲೊಂದನ್ನು ಬಿಟ್ಟು! ಧನಂಜಯನಿಗೆ ದಾಂಪತ್ಯ ಬದುಕಿಗೆ ಸಂಬಂಧಿಸಿದಂತೆ ಟಿಪ್ಸ್ ಕೊಡೋದೇನೂ ಇಲ್ಲ, ತಾಳ್ಮೆಯೊಂದಿದ್ದರೆ ಸಂತೋಷವಾಗಿರ್ತೀಯಾ ಅಂತ ಹೇಳಿದ್ದೇನೆ ಅಂದಾಗ ಅವರರು ಹೇಳಿದಾಗ ಪಕ್ಕದಲ್ಲಿದ್ದ ಧನಂಜಯ ಅತ್ತಿಗೆ ಜೋರಾಗಿ ನಕ್ಕರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ:
Latest Videos

ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!

Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್

ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ

ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
