ವಿರೋಧಿ ಬಣ ದೆಹಲಿಗೆ ತೆರಲಿ ವರಿಷ್ಠರಿಗೆ ದೂರು ಸಲ್ಲಿಸಿದರೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಧೃತಿಗಟ್ಟಿಲ್ಲ
ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷನಾದಾಗಿನಿಂದ ಟೀಕೆಗಳನ್ನು ಮಾಡುತ್ತಿದ್ದಾರೆ. ಈಗ ಯತ್ನಾಳ್ ಅವರೊಂದಿಗೆ ಹಲವಾರು ಬಿಜೆಪಿ ನಾಯಕರು ಮತ್ತು ಶಾಸಕರು ಸೇರಿಕೊಂಡಿದ್ದಾರೆ . ವಿಜಯೇಂದ್ರ ವಿರೋಧಿ ಬಣ ಈಗ ದೆಹಲಿಯಲ್ಲಿದೆ. ಅವರೆಲ್ಲರ ಆಗ್ರಹ ಮತ್ತು ಒತ್ತಾಯ ಒಂದೇ-ವಿಜಯೇಂದ್ರರನ್ನು ಅದ್ಯಕ್ಷ ಸ್ಥಾನದಿಂದ ಸರಿಸಿ ಬೇರೆಯವರಿಗೆ ಜವಾಬ್ದಾರಿ ವಹಿಸಬೇಕು.
ದೇವನಹಳ್ಳಿ: ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಿಲ್ಲ, ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ದೆಹಲಿ ವರಿಷ್ಠರ ಮುಂದೆ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಸದಸ್ಯರು ಮುಂದೆ ಹೇಳಿದ್ದಾರೆ ಎಂದು ಟಿವಿ9 ಪ್ರತಿನಿಧಿ ಹೇಳಿದ್ದಕ್ಕೆ ಉತ್ತರಿಸಿದ ಬಿವೈ ವಿಜಯೇಂದ್ರ, ಭ್ರಷ್ಟ ಕಾಂಗ್ರೆಸ್ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದ ಹೋರಾಟದಲ್ಲಿ ನೇತೃತ್ವ ವಹಿಸಿದ್ದು ತಾನು, ಅವರ ಇಂಥ ಹೇಳಿಕೆಗಳಿಂದ ಕಾರ್ಯಕರ್ತರೆಲ್ಲ ನೊಂದಿದ್ದಾರೆ, ದೆಹಲಿ ವರಿಷ್ಠರ ಮುಂದೆ ಏನು ಹೇಳಬೇಕಾಗಿದೆಯೋ ಹೇಳಿಕೊಳ್ಳಲಿ, ತಾನು ವರಿಷ್ಠರೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾನು ಹಳ್ಳಿ ಗುಗ್ಗು, ವಿಜಯೇಂದ್ರಗೆ ಇಂಗ್ಲಿಷ್ ಗೊತ್ತು, ರಾಷ್ಟ್ರೀಯ ಕಾರ್ಯದರ್ಶಿಯಾಗಲು ಅವರೇ ಸೂಕ್ತ: ಯತ್ನಾಳ್