ಏಳು ವರ್ಷದ ಬಾಲಕನ ಕೆನ್ನೆ ಮೇಲಿನ ಆಳ ಗಾಯಕ್ಕೆ ಫೆವಿಕ್ವಿಕ್ ಮೆತ್ತಿ ಚಿಕಿತ್ಸೆ ನೀಡಿದ ಹಾವೇರಿಯ ನರ್ಸ್ ಜ್ಯೋತಿ!
ಯಾಕೆ ಹೀಗೆ ಮಾಡಿದ್ದು, ಫೆವಿಕ್ವಿಕ್ ಏನು, ಅದನ್ನು ಯಾವ ಕೆಲಸಕ್ಕೆ ಬಳಸಲಾಗುತ್ತದೆ ಅಂತ ನಿಮಗೆ ಗೊತ್ತಿಲ್ಲವೇ ಅಂತ ಬಾಲಕನ ಸಂಬಂಧಿಯೊಬ್ಬರು ಕೇಳಲು ಹೋದರೆ ಜ್ಯೋತಿ ಮೇಡಂ ಅವರದ್ದು ಡೆವಿಲ್ ಮೇ ಕೇರ್ ಅಟಿಟ್ಯೂಡ್! ಸಣ್ಣಪುಟ್ಟ ಗಾಯಗಳಿಗೆಲ್ಲ ತಾನು ಫೆವಿಕ್ವಿಕ್ ಬಳಸಿಯೇ ಟ್ರೀಟ್ಮೆಂಟ್ ನೀಡೋದು ಅನ್ನುತ್ತಾಳೆ. ಇಲ್ಲಿನ ಮೆಡಿಕಲ್ ಆಫೀಸರ್, ಹಾನಗಲ್ ಎಡಿಹೆಚ್ಒ ಮತ್ತು ಹಾವೇರಿ ಡಿಹೆಚ್ಒ ಜ್ಯೋತಿ ವಿರುದ್ಧ ಕ್ರಮ ಜರುಗಿಸದಿದ್ದರೆ ಆಸ್ಪತ್ರೆಗೆ ಬರುವ ರೋಗಿಗಳ ಜೀವಕ್ಕೆ ಕುತ್ತಾಗಲಿದ್ದಾಳೆ.
ಹಾವೇರಿ: ಈ ನರ್ಸಮ್ಮನ ಹೆಸರು ಜ್ಯೋತಿ. ವೃತ್ತಿಯಲ್ಲಿ ನರ್ಸ್ ಆಗಿದ್ದು ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿರುವ ಆಡೂರು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಾಳೆ. ಈ ಪುಣ್ಯಾತ್ಗಿತ್ತಿ ಅದ್ಯಾವ ನರ್ಸಿಂಗ್ ಕಾಲೇಜಿನಲ್ಲಿ ಕೋರ್ಸ್ ಮಾಡಿಬಂದಿದ್ದಾಳೋ? ಕಾಲೇಜನ್ನು ದೂರೋದ್ರಲ್ಲಿ ಅರ್ಥವಿಲ್ಲ ಬಿಡಿ. ವಿಷಯವೇನೆಂದರೆ ಕಳೆದ ತಿಂಗಳು 14ರಂದು (ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ) ಜ್ಯೋತಿ ಮಾಡಿರುವ ಮಹತ್ಕಾರ್ಯವೇನು ಗೊತ್ತಾ? 7-ವರ್ಷದ ಬಾಲಕನೊಬ್ಬ ಆಡುವಾಗ ಕೆಳಗೆ ಬಿದ್ದು ಕೆನ್ನೆಗೆ ಆಳವಾದ ಗಾಯಮಾಡಿಕೊಂಡು ಆಸ್ಪತ್ರೆಗೆ ಹೋದರೆ ನರ್ಸಮ್ಮ ಬಾಲಕನ ಗಾಯಕ್ಕೆ ಫೆವಿಕ್ವಿಕ್ ಹಾಕಿ ಕಳಿಸಿದ್ದಾಳೆ. ಫೆವಿಕ್ವಿಕ್ ನಲ್ಲಿ ಮಾನವದೇಹಕ್ಕೆ ಅಪಾಯವೊಡ್ಡುವ ರಾಸಾಯನಿಕಗಳಿರುತ್ತವೆ ಅಂತ ಈಯಮ್ಮನಿಗೆ ಗೊತ್ತಿಲ್ಲವೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೊಪ್ಪಳ: ಮಗು ಸತ್ತಿದೆ ಎಂದು ಸುಳ್ಳು ಹೇಳಿ ಮಾರಾಟ ಮಾಡಿದ್ರಾ ನರ್ಸ್? 5 ವರ್ಷ ಹಿಂದಿನ ಪ್ರಕರಣದ ತನಿಖೆ ಶುರು
Latest Videos