ಕೆಲವರ ಗಮನ ಸ್ವಿಮ್ಮಿಂಗ್​ಪೂಲ್, ಶೀಶ್​ಮಹಲ್ ಕಡೆಗಿದ್ದರೆ ನಮ್ಮ ಆದ್ಯತೆ ಶುದ್ಧ ನೀರು ನೀಡುವುದಾಗಿತ್ತು; ಮೋದಿ ವಾಗ್ದಾಳಿ

ಕೆಲವರ ಗಮನ ಸ್ವಿಮ್ಮಿಂಗ್​ಪೂಲ್, ಶೀಶ್​ಮಹಲ್ ಕಡೆಗಿದ್ದರೆ ನಮ್ಮ ಆದ್ಯತೆ ಶುದ್ಧ ನೀರು ನೀಡುವುದಾಗಿತ್ತು; ಮೋದಿ ವಾಗ್ದಾಳಿ

ಸುಷ್ಮಾ ಚಕ್ರೆ
|

Updated on: Feb 04, 2025 | 6:33 PM

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಿದರು. ಈ ವೇಳೆ ಕೇಜ್ರಿವಾಲ್ ಕುರಿತು ಟೀಕೆ ಮಾಡಿದ ಮೋದಿ, ಕೆಲವು ರಾಜಕೀಯ ನಾಯಕರು ಮನೆಯಲ್ಲಿ ಜಕುಝಿ ಮತ್ತು ಸ್ಟೈಲಿಶ್ ಶವರ್‌ಗಳ ಮೇಲೆ ಕೇಂದ್ರೀಕರಿಸುತ್ತಾರೆ ಎಂದಿದ್ದಾರೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ, ರಾಷ್ಟ್ರಪತಿಗಳು ಮುಂಬರುವ 25 ವರ್ಷಗಳ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಬೆಳೆಸುವ ಬಗ್ಗೆ ಮಾತನಾಡಿದರು ಎಂದು ಪ್ರಧಾನಿ ಮೋದಿ ಹೇಳಿದರು.

ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕುರಿತು ಸಂಸತ್ ಅಧಿವೇಶನದಲ್ಲಿ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕೆಲವರು ಮನೆಯಲ್ಲಿ ಜಕುಝಿಯತ್ತ ಗಮನ ಹರಿಸಿದ್ದರು, ಸ್ಟೈಲಿಶ್ ಶವರ್, ಶೀಶ್ ಮಹಲ್ ನಿರ್ಮಿಸಲು ಹಣ ಖರ್ಚು ಮಾಡಿದ್ದರು. ಆದರೆ, ನಾವು ಹರ್ ಘರ್ ಜಲ ಯೋಜನೆ ಮೂಲಕ ಪ್ರತಿಯೊಂದು ಮನೆಗೂ ಶುದ್ಧವಾದ ಕುಡಿಯುವ ನೀರು ನೀಡುವ ಬಗ್ಗೆ ಗಮನ ಹರಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿಯ ಬಂಗಲೆಗೆ ಐಷಾರಾಮಿ ಫಿಟ್ಟಿಂಗ್‌ಗಳಿಗಾಗಿ 45 ಕೋಟಿ ರೂ. ಖರ್ಚು ಮಾಡಿದ ಆರೋಪ ಹೊತ್ತಿರುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಪರೋಕ್ಷವಾಗಿ ಮೋದಿ ಟೀಕಾಪ್ರಹಾರ ನಡೆಸಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ