ಮಧ್ಯಪ್ರದೇಶದ ಕಾಡಲ್ಲಿ ಬೇಟೆಯಾಡುವಾಗ ಹಂದಿಯೊಂದಿಗೆ ಬಾವಿಗೆ ಬಿದ್ದ ಹುಲಿ; ಆಮೇಲೇನಾಯ್ತು?
ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಒಂದು ಹುಲಿ ಕಾಡುಹಂದಿಯನ್ನು ಬೇಟೆಯಾಡುತ್ತಿತ್ತು. ಆದರೆ, ಅದಕ್ಕೆ ಹಂದಿಯನ್ನು ಹಿಡಿಯಲು ಸಾಧ್ಯವಾಗಲಿಲ್ಲ. ತೀವ್ರವಾದ ಬೆನ್ನಟ್ಟುವಿಕೆಯ ನಂತರ ಹುಲಿ ಮತ್ತು ಕಾಡುಹಂದಿ ಆಳವಾದ ಬಾವಿಗೆ ಬಿದ್ದವು. ಸಂಜೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಆಳವಾದ ಕೃಷಿ ಬಾವಿಯಲ್ಲಿ ಹುಲಿ ಮರಿ ಮತ್ತು ಕಾಡುಹಂದಿ ಒಟ್ಟಿಗೆ ಸಿಕ್ಕಿಹಾಕಿಕೊಂಡಿತ್ತು. ನಂತರ ಆ ಎರಡೂ ಪ್ರಾಣಿಗಳನ್ನು ಬಾವಿಯಿಂದ ರಕ್ಷಿಸಲಾಯಿತು. ಅದು ಹೇಗೆಂಬುದರ ವಿಡಿಯೋ ಇಲ್ಲಿದೆ.
ಸಿಯೋನಿ: ಹುಲಿಯೊಂದು ಕಾಡುಹಂದಿಯನ್ನು ಬೆನ್ನಟ್ಟಲು ಪ್ರಾರಂಭಿಸಿತು. ಆಗ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲದೆ ಕಾಡುಹಂದಿ ಬಾವಿಗೆ ಹಾರಿತು. ಅದರ ಹಿಂದೆ ಹುಲಿಯೂ ಬಾವಿಗೆ ಜಿಗಿಯಿತು. ಅವೆರಡನ್ನು ಹೇಗೆ ಹೊರಗೆ ತರಲಾಯಿತು? ಎಂಬುದರ ವಿಡಿಯೋ ಇಲ್ಲಿದೆ. ಶಬ್ದ ಕೇಳುತ್ತಿದ್ದಂತೆ ಗ್ರಾಮಸ್ಥರು ಬಾವಿಯ ಸುತ್ತಲೂ ಬೇಗನೆ ಜಮಾಯಿಸಿದರು. ತಕ್ಷಣ ಹುಲಿ ಮರಿ ಮತ್ತು ಕಾಡುಹಂದಿ ಎರಡನ್ನೂ ಸುರಕ್ಷಿತವಾಗಿ ಹೊರತೆಗೆಯಲು ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಈ ಮೂಲಕ ಎರಡೂ ಪ್ರಾಣಿಗಳನ್ನು ಸುರಕ್ಷಿತವಾಗಿ ಹೊರಗೆ ತರಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ