‘ಸಾರಾಯಿ ಶಾಂತಮ್ಮ’ ರಾಗಿಣಿ ದ್ವಿವೇದಿ ಬಗ್ಗೆ ತುಕಾಲಿ ಸಂತು ಹೊಗಳಿದ್ದೇ ಹೊಗಳಿದ್ದು

‘ಸಾರಾಯಿ ಶಾಂತಮ್ಮ’ ರಾಗಿಣಿ ದ್ವಿವೇದಿ ಬಗ್ಗೆ ತುಕಾಲಿ ಸಂತು ಹೊಗಳಿದ್ದೇ ಹೊಗಳಿದ್ದು

ಮದನ್​ ಕುಮಾರ್​
|

Updated on: Feb 04, 2025 | 9:47 PM

‘ಗಜರಾಮ’ ಸಿನಿಮಾದ ವಿಶೇಷ ಹಾಡಿನಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಹೆಜ್ಜೆ ಹಾಕಿದ್ದಾರೆ. ‘ಸಾರಾಯಿ ಶಾಂತಮ್ಮ’ ಹಾಡು ಸಖತ್ ಗ್ಲಾಮರಸ್ ಆಗಿ ಮೂಡಿಬಂದಿದೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ತುಕಾಲಿ ಸಂತೋಷ್ ಅವರು ರಾಗಿಣಿ ದ್ವಿವೇದಿ ಅವರನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ರಾಜವರ್ಧನ್ ನಟನೆಯ ಈ ಸಿನಿಮಾ ಫೆಬ್ರವರಿ 7ರಂದು ಬಿಡುಗಡೆ ಆಗಲಿದೆ.

ರಾಜವರ್ಧನ್ ಅವರು ‘ಗಜರಾಮ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ‘ಸಾರಾಯಿ ಶಾಂತಮ್ಮ’ ಹಾಡಿನಲ್ಲಿ ರಾಗಿಣಿ ಅವರು ಬಿಂದಾಸ್ ಆಗಿ ಹೆಜ್ಜೆ ಆಗಿದ್ದಾರೆ. ಸಿನಿಮಾದ ಪ್ರೆಸ್​ಮೀಟ್​ನಲ್ಲಿ ತುಕಾಲಿ ಸಂತೋಷ್ ಅವರು ಮಾತನಾಡಿದ್ದಾರೆ. ‘ನಾನು ಇಂದು ರಾಗಿಣಿ ಮೇಡಂ ಅವರನ್ನು ನೋಡಲು ಹಾಸನದಿಂದ ಬಂದೆ. ನಾವೆಲ್ಲ ಅವರನ್ನು ಟಿವಿಯಲ್ಲಿ ನೋಡುತ್ತಿದ್ದೆವು. ಈಗ ನೇರವಾಗಿ ನೋಡುವ ಅವಕಾಶ ಸಿಕ್ಕಿದೆ’ ಎಂದು ತುಕಾಲಿ ಸಂತೋಷ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.