ರಾಹುಲ್ ದ್ರಾವಿಡ್ ಕಾರು ಅಪಘಾತಕ್ಕೆ ಕಾರಣವೇನು? ಯಾರದ್ದು ತಪ್ಪು? ಇಲ್ಲಿದೆ ವಿವರ
Dravid Car Accident: ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಕಾರು ಮತ್ತು ಆಟೋ ನಡುವೆ ಸಣ್ಣ ಪ್ರಮಾಣದ ಅಪಘಾತ ಸಂಭವಿಸಿದೆ. ಇನ್ನು ಅಪಘಾತಕ್ಕೆ ಕಾರಣವೇನು? ಇದರಲ್ಲಿ ಯಾರದು ತಪ್ಪು? ಆಟೋ ಚಾಲಕನದ್ದು ತಪ್ಪಾ ಅಥವಾ ರಾಹುಲ್ ದ್ರಾವಿಡ್ ಅವರದ್ದು ತಪ್ಪಾ? ಅಪಘಾತ ನಡೆದ ಸ್ಥಳದಿಂದ ನಮ್ಮ ಪ್ರತಿನಿಧಿ ಪ್ರದೀಪ್ ಚಿಕ್ಕಾಟೆ ಮಾಹಿತಿ ನೀಡಿದ್ದು, ಅಸಲಿಗೆ ಏನಾಗಿದೆ ಎನ್ನುವುದನ್ನು ವಿವರಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ, 2024ರ ಟಿ-20 ವಿಶ್ವಕಪ್ ಜಯಿಸಿದ ತಂಡದ ಹೆಡ್ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ಅವರ ಕಾರು ಅಪಘಾತವಾಗಿದೆ. ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿಂದು ದ್ರಾವಿಡ್ ಕಾರು ಹಾಗೂ ಗೂಡ್ಸ್ ಆಟೋ ನಡುವೆ ಚಿಕ್ಕ ಪ್ರಮಾಣದಲ್ಲಿ ಅಪಘಾತವಾದೆ. ಆದ್ರೆ ಈ ಅಪಘಾತದಲ್ಲಿ ಯಾವುದೇ ಗಾಯವಾಗಲಿ, ಪ್ರಾಣಾಪಾಯದಂತಹ ಘಟನೆಗಳು ಸಂಭವಿಸಿಲ್ಲ. ಘಟನೆ ಬಳಿಕ ರಾಹುಲ್ ದ್ರಾವಿಡ್ ಕೆಳಗಿಳಿದು ಕಾರನ್ನು ಪರಿಶೀಲಿಸಿದ್ದಾರೆ. ಮಾತ್ರವಲ್ಲ ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಹಾಗೂ ಗೂಡ್ಸ್ ಆಟೋ ಚಾಲಕನ ನಡುವೆ ಸಣ್ಣ ವಾಗ್ವಾದ ನಡೆದಿದೆ. ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಇನ್ನು ಅಪಘಾತಕ್ಕೆ ಕಾರಣವೇನು? ಇದರಲ್ಲಿ ಯಾರದು ತಪ್ಪು? ಆಟೋ ಚಾಲಕನದ್ದು ತಪ್ಪಾ ಅಥವಾ ರಾಹುಲ್ ದ್ರಾವಿಡ್ ಅವರದ್ದು ತಪ್ಪಾ? ಅಪಘಾತ ನಡೆದ ಸ್ಥಳದಿಂದ ನಮ್ಮ ಪ್ರತಿನಿಧಿ ಪ್ರದೀಪ್ ಚಿಕ್ಕಾಟೆ ಮಾಹಿತಿ ನೀಡಿದ್ದು, ಅಸಲಿಗೆ ಏನಾಗಿದೆ ಎನ್ನುವುದನ್ನು ವಿವರಿಸಿದ್ದಾರೆ.

