Rahul Dravid Car Accident: ಬೆಂಗಳೂರಿನಲ್ಲಿ ದ್ರಾವಿಡ್ ಕಾರು ಅಪಘಾತ: ವಿಡಿಯೋ ನೋಡಿ
Rahul Dravid Car Accident: ಟೀಮ್ ಇಂಡಿಯಾದ ಮಾಜಿ ಆಟಗಾರ, 2024ರ ಟಿ-20 ವಿಶ್ವಕಪ್ ಜಯಿಸಿದ ತಂಡದ ಹೆಡ್ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ಅವರ ಕಾರು ಅಪಘಾತವಾಗಿದೆ. ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿಂದು ದ್ರಾವಿಡ್ ಕಾರು ಹಾಗೂ ಗೂಡ್ಸ್ ಆಟೋ ನಡುವೆ ಚಿಕ್ಕ ಪ್ರಮಾಣದಲ್ಲಿ ಅಪಘಾತವಾದೆ. ಆದ್ರೆ ಈ ಅಪಘಾತದಲ್ಲಿ ಯಾವುದೇ ಗಾಯವಾಗಲಿ, ಪ್ರಾಣಾಪಾಯದಂತಹ ಘಟನೆಗಳು ಸಂಭವಿಸಿಲ್ಲ.
ಬೆಂಗಳೂರು ಟ್ರಾಫಿಕ್‌ನಲ್ಲಿ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೋ ಬಂದು ಗುದ್ದಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಇಂದು (ಫೆಬ್ರವರಿ 04) ಈ ಘಟನೆ ನಡೆದಿದೆ. ಕಾರಿಗೆ ಗೂಡ್ಸ್ ಆಟೋ ಟಚ್ ಆದ ಬಳಿಕ ರಾಹುಲ್ ದ್ರಾವಿಡ್ ಕಾರಿನಿಂದ ಕೆಳಗಿಳಿದು ಪರಿಶೀಲನೆ ನಡೆಸಿದರು. ಈ ವೇಳೆ ದ್ರಾವಿಡ್ ಹಾಗೂ ಗೂಡ್ಸ್ ಆಟೋ ಚಾಲಕನ ಮಧ್ಯೆ ಸಣ್ಣ ವಾಗ್ವಾದ ನಡೆದಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಆದ್ರೆ, ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ಟ್ರಾಫಿಕ್ ಜಾಮ್ ವೇಳೆ ನಿಂತಿದ್ದ ಕಾರಿಗೆ ಹಿಂದೆ ಗೂಡ್ಸ್ ಆಟೋ ಡಿಕ್ಕಿ ಹೊಡೆದಿದೆ. ಘಟನೆ ನಂತರ ದ್ರಾವಿಡ್ ಕಾರಿನಿಂದ ಇಳಿದು ಬಂದು ಪರಿಶೀಲಿಸಿದರು. ಇನ್ನು ಟ್ರಾಫಿಕ್ ಇದ್ದ ಕಾರಣ ದ್ರಾವಿಡ್ ಕಾರು ಮುಂದಿನ ವಾಹನಕ್ಕೆ ಟಚ್ ಆಗಿದೆ ಎನ್ನಲಾಗಿದೆ. ಹೀಗಾಗಿ ದ್ರಾವಿಡ್ ತಮ್ಮ ಕಾರಿನ ಮುಂಭಾಗವನ್ನು ಪರಿಶೀಲಿಸುವುದನ್ನು ವಿಡಿಯೋನಲ್ಲಿ ಕಾಣಬಹುದು. ಇನ್ನು ಇದರಲ್ಲಿ ಆಟೋ ಚಾಲಕನದ್ದು ತಪ್ಪಾ ಅಥವಾ ದ್ರಾವಿಡ್ ಅವರದ್ದು ತಪ್ಪಾ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಸದ್ಯ ರಾಹುಲ್ ದ್ರಾವಿಡ್, ಗೂಡ್ಸ್ ಆಟೋ ಚಾಲಕನ ನಂಬರ್ ಪಡೆದು ಅಲ್ಲಿಂದ ತೆರಳಿದ್ದಾರೆ.
ಇದನ್ನೂ ಓದಿ: ರಾಹುಲ್ ದ್ರಾವಿಡ್ ಕಾರು ಅಪಘಾತಕ್ಕೆ ಕಾರಣವೇನು? ಯಾರದ್ದು ತಪ್ಪು? ಇಲ್ಲಿದೆ ವಿವರ
Published on: Feb 04, 2025 09:42 PM
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ

