ಅಕ್ಕನನ್ನು ನೋಡಲು ಬಂದ ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!

|

Updated on: Jun 25, 2024 | 7:17 PM

ಮೊನ್ನೆ ಜೈಲಿನ ಆವರಣಕ್ಕೆ ಬಂದಿದ್ದ ಪವಿತ್ರಾ ಗೌಡ ತಮ್ಮ, ಕೆಮೆರಾಗಳಲ್ಲಿ ತನ್ನನ್ನು ಸೆರೆ ಹಿಡಯುತ್ತಿದ್ದ ಮಾಧ್ಯಮದವರ ಮೇಲೆ, ನಿಮಗೆ ಮಾಡಲು ಬೇರೆ ಕೆಲಸವಿಲ್ಲ ಅಂತ ಕೂಗಾಡಿದ್ದರು. ಅಯ್ಯಾ ಪ್ರಭೃತಿ, ಕೆಮೆರಾಮನ್ ಗಳ ಕೆಲಸವೇ ಇದು, ಜೈಲಿಗೆ ಹೋದವರು, ಅವರನ್ನು ನೋಡಲು ಬಂದವರನ್ನು ಕೆಮೆರಾದಲ್ಲಿ ಸೆರೆ ಹಿಡಿದು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಜನರಿಗೆ ತೋರಿಸುವುದು!

ಆನೇಕಲ್ (ಬೆಂಗಳೂರು): ಈ ವ್ಯಕ್ತಿಯ ಗುರುತು ನಿಮಗಿರಬಹುದು. ಮೊನೆ 21 ನೇ ತಾರೀಖು ಈತ ಇದೇ ಸೆಂಟ್ರಲ್ ಜೈಲಿನ ಅವರಣದೊಳಗೆ (central jail premises) ಬಂದ ದೃಶ್ಯಗಳನ್ನು ನಾವು ನಿಮಗೆ ತೋರಿಸಿದ್ದೆವು. ಹೌದು, ಇವರು ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ (Renukaswamy murder case) ನ್ಯಾಯಾಂಗ ಬಂಧನದಲ್ಲರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡಳ (Pavitra Gowda) ಚಿಕ್ಕ ಸಹೋದರ. ಇವತ್ತು ಈ ಮಹಾಶಯ ಮುಖಕ್ಕೆ ಮಾಸ್ಕ್ ಹಾಕ್ಕೊಂಡು ಬಂದಿದ್ದರು. ಮೊದಲು ಜೈಲು ಅವರಣದೊಳಗೆ ಹೋಗಿ ವಾಪಸ್ಸು ತಮ್ಮ ಕಾರಿನ ಬಳಿ ಬರುತ್ತಾರೆ. ಕಾರಿನ ಬಳಿ ಹೋಗುವಾಗ ಮಾಧ್ಯಮಗಳ ಕೆಮೆರಾಮನ್ ಗಳು ಅಕ್ಕನ ಜೊತೆ ಮಾತಾಡಿದ್ರಾ? ದರ್ಶನ್ ಜೊತೆ ಮಾತಾಡಿದ್ರಾ ಅಂತ ಕೇಳುತ್ತಾರೆ. ಅದರೆ ಯುವಕ ಯಾವುದಕ್ಕೂ ಉತ್ತರಿಸದೆ ತನ್ನ ಪಾಡಿಗೆ ತಾನು ನಡೆದು ಹೋಗುತ್ತಾರೆ. ಕಾರಿನ ಹಿಂಭಾಗದಲ್ಲಿದ್ದ ಒಂದು ಬ್ಯಾಗನ್ನು ಎತ್ತಿಕೊಂಡು ಪುನಃ ಜೈಲು ಆವರಣ ಪ್ರವೇಶಿಸುತ್ತಾರೆ. ಬ್ಯಾಗಿನಲ್ಲಿ ಪ್ರಾಯಶಃ ಅಕ್ಕನಿಗಾಗಿ ಊಟ ತಂದಿರಬಹುದು. ಹೋಗುವಾಗಲೂ ಆಸಾಮಿ ಮಾದ್ಯಮದವರ ಜೊತೆ ಮಾತಾಡಲ್ಲ. ಮಾಧ್ಯಮದವರ ಜೊತೆ ಮಾತಾಡಕೂಡದೆಂದು ಪವಿತ್ರಾ ಇಲ್ಲ ದರ್ಶನ್ ಹೇಳಿರಬಹುದೇ? ಗೊತ್ತಿಲ್ಲ ಮಾರಾಯ್ರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Breaking: ದರ್ಶನ್ ಮತ್ತೆ ಪೊಲೀಸ್ ಕಸ್ಟಡಿಗೆ, ಪವಿತ್ರಾ ಗೌಡ ಜೈಲು ಪಾಲು