ಸೆಂಟ್ರಲ್ ಜೈಲು ಆವರಣದೊಳಗೆ ಕಾರು ಒಯ್ಯಲು ಬಿಡದೆ ಹೋಗಿದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್!

ಸೆಂಟ್ರಲ್ ಜೈಲು ಆವರಣದೊಳಗೆ ಕಾರು ಒಯ್ಯಲು ಬಿಡದೆ ಹೋಗಿದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 25, 2024 | 6:33 PM

ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಉದ್ದೇಶಪೂರ್ವಕವಾಗೇನೂ ವಕೀಲನಿಗೆ ಕಾರನ್ನು ಜೈಲು ಆವರಣದೊಳಗೆ ಒಯ್ಯಲು ಅನುಮತಿ ನಿರಾಕರಿಸಲಿಲ್ಲ. ತಮ್ಮ ಮೇಲಧಿಕಾರಿಗಳು ಹೇಳಿದ್ದನ್ನು ಅವರು ಮಾಡುತ್ತಾರೆ. ಚೆಕ್ ಪೋಸ್ಟ್ ನಿಂದ ಜೈಲು ವಕೀಲ ಹೇಳಿದಂತೆ 2 ಕಿಮೀ ದೂರವೇನೂ ಇಲ್ಲ ಮತ್ತು ಅವರಿಗೆ 200 ಮೀಟರ್ ನಡೆಯಲಾಗದಷ್ಟು ವಯಸ್ಸು ಕೂಡ ಆಗಿಲ್ಲ.

ಆನೇಕಲ್ (ಬೆಂಗಳೂರು): ಪೊಲೀಸ್ ಮತ್ತು ವಕೀಲರ ನಡುವಿನ ಸಂಘರ್ಷಗಳಿಗೆ ನಮ್ಮ ದೇಶದಲ್ಲಿ ಇತಿಹಾಸವಿದೆ. ಇವತ್ತು ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿನ ಚೆಕ್ ಪೋಸ್ಟ್ (central jail check post) ಬಳಿ ಅಂಥದೊಂದು ಪ್ರಸಂಗ ನಡೆಯಿತಾದರೂ ವಿಕೋಪಕ್ಕೆ ಹೋಗಲಿಲ್ಲ. ವಿಷಯ ದೊಡ್ಡದೇನಲ್ಲ, ಚಿಕ್ಕದು. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್ (actor Darshan) ಅವರನ್ನು ಕಾಣಲು ಅವರ ವಕೀಲ (lawyer) ಚೆಕ್ ಪೋಸ್ಟ್ ಬಳಿ ಬಂದಾಗ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ (police staff), ಕಾರನ್ನು ಜೈಲಿನ ಆವರಣದೊಳಗೆ ಒಯ್ಯುವಂತಿಲ್ಲ, ಇಲ್ಲೇ ಪಾರ್ಕ್ ಮಾಡಿ ನಡೆದು ಹೋಗಿ ಅನ್ನುತ್ತಾರೆ. ಅಷ್ಟಕ್ಕೆ ಉರಿದುಬೀಳುವ ವಕೀಲರು, ಅದ್ಹೇಗೆ ಕಾರು ಬಿಡಲ್ಲ, ನೀವು ಹೇಳಿದ್ದೇ ಕಾನೂನಾ? ನಾನು 60-ವರ್ಷ ದಾಟಿರುವ ಸೀನಿಯರ್ ಸಿಟಿಜನ್, 2 ಕಿಮೀ ಹೇಗೆ ನಡೆದುಹೋಗುವುದು? ನಿಮ್ಮ ಮೇಲಧಿಕಾರಿಗಳೊಂದಿಗೆ ಮಾತಾಡಿಸಿ ಅನ್ನುತ್ತಾರೆ. ಮೇಲಧಿಕಾರಿಗಳು ಮೊದಲು ಕಾರನ್ನು ಬಿಡಬೇಡಿ ಅಂತ ಹೇಳಿದರೂ ವಕೀಲ ಹಠ ಮುಂದುವರಿಸಿದಾಗ ಅನುಮತಿ ನೀಡುತ್ತಾರೆ. ಪ್ರಕರಣ ಅಲ್ಲಿಗೆ ಕೊನೆಗೊಳ್ಳುತ್ತದೆ,

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Vijayalakshmi Darshan: ಇನ್​ಸ್ಟಾಗ್ರಾಮ್​ ಪ್ರಾಫೈಲ್​ ಪಿಕ್ಚರ್​ ಡಿಲೀಟ್ ಮಾಡಿ, ದರ್ಶನ್​ನ ಅನ್​ಫಾಲೋ ಮಾಡಿದ ವಿಜಯಲಕ್ಷ್ಮಿ