ನಮ್ಮ ಮನೆಯಲ್ಲಿ ರೇಣುಕಾಸ್ವಾಮಿ ಆಭರಣವಾಗಲೀ, ಹಣವಾಗಲೀ ಪೊಲೀಸ್ ಮಹಜರ್ ನಲ್ಲಿ ಪತ್ತೆಯಾಗಿಲ್ಲ: ಸಹನಾ, ಆರೋಪಿಯ ಪತ್ನಿ
ನಟ-ನಟಿಯರ ಬಗ್ಗೆ ಅಭಿಮಾನ, ಪ್ರೀತಿ ಇಟ್ಟುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ, ಅದರೆ ಅದನ್ನು ಒಂದು ಚೌಕಟ್ಟಿಗೆ ಸೀಮಿತವಾಗಿರಿಸಿರಬೇಕು. ಅಭಿಮಾನ ಅಂಧಾಭಿಮಾನದಲ್ಲಿ ಪರಿವರ್ತನೆಯಾದರೆ, ತಮ್ಮ ಆರಾಧ್ಯದೈವ ಹೇಳೋದೆಲ್ಲ ಸತ್ಯ, ಮಾಡೋದೆಲ್ಲ ನ್ಯಾಯ ಸಮ್ಮತ ಅನಿಸಲಾರಂಭಿಸುತ್ತದೆ. ಇದರ ಪರಿಣಾಮವೇ ರೇಣುಕಾಸ್ವಾಮಿಯ ಬರ್ಬರ ಹತ್ಯೆ!
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಅರೋಪಿ ನಂಬರ್ 4 ಆಗಿರುವ ರಘು (Raghu) ಮೇಲೆ ಮೃತನ ಮೈ ಮೇಲಿದ್ದ ಚಿನ್ನಾಭರಣಗಳನ್ನು ಕದ್ದು ತನ್ನ ಪತ್ನಿಗೆ ನೀಡಿದ ಆರೋಪವೂ ಇದೆ. ಆದರೆ ಅದು ಸುಳ್ಳು ಎನ್ನುತ್ತಾರೆ ರಘು ಪತ್ನಿ ಸಹನಾ (Sahana). ಟಿವಿ9 ಚಿತ್ರದುರ್ಗ ಪ್ರತಿನಿಧಿ ಸಹನಾ ಅವರೊಂದಿಗೆ ಮಾತಾಡಿದ್ದು ಪೊಲೀಸರು ಮನೆಗೆ ಬಂದು ಮಹಜರ್ ನಡೆಸಿದಾಗ ಯಾವುದೇ ಒಡವೆ ಸಿಕ್ಕಿಲ್ಲ ಮತ್ತು ಕೊಲೆಗಾಗಿ ರಘುಗೆ ರೂ. 10 ಲಕ್ಷ ನೀಡಿದ್ದಾರೆ ಅನ್ನೋದನ್ನು ತಾನು ಕೇಳಿಸಿಕೊಂಡಿದ್ದೇನೆಯೇ ಹೊರತು ಮನೆಯಲ್ಲಿ ಹಣ ಸಿಕ್ಕಿತು ಅಂತ ಹೇಳುತ್ತಿರುವುದು ಸತ್ಯಕ್ಕೆ ದೂರ ಎಂದು ಸಹನಾ ಹೇಳುತ್ತಾರೆ. ತನ್ನ ಪತಿ ಟೂರಿಸ್ಟ್ ಗಾಡಿ ಓಡಿಸುತ್ತಾರೆ ಎನ್ನುವ ಸಹನಾ ಅವರು ಹೊರಗಡೆ ಹೋಗುವಾಗ ಎಲ್ಲಿಗೆ ಹೋಗುತ್ತಿದ್ದೇನೆ ಅಂತ ಪತ್ನಿಗೆ ತಿಳಿಸಲ್ವಂತೆ, ಅವರು ರಾತ್ರಿ ಬರೋದು ತಡವಾದಾಗ ಇವರೇ ಫೋನ್ ಮಾಡಿ ಎಲ್ಲಿದ್ದಾರೆ ಅಂತ ವಿಚಾರಿಸುತ್ತಾರಂತೆ. ದರ್ಶನ್ ಕಟ್ಟಾಭಿಮಾನಿಯಾಗಿರುವ ರಘು ಚಿತ್ರದುರ್ಗ ಜಿಲ್ಲೆ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷರೂ ಆಗಿದ್ದಾರೆ. ದರ್ಶನ್ ಮೇಲಿನ ಅಭಿಮಾನಕ್ಕೆ ಅವರು ಅವತ್ತು ಮನೆಯಿಂದ ಹೋದರು, ಕೊಲೆ ಮಾಡಬೇಕಿದೆ ಅಂತ ಹೇಳಿದ್ದರೆ ರಘು ಹೋಗುತ್ತಿದ್ದರೆ ಎಂದು ಸಹನಾ ಕೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ: ನಾಶ ಪಡಿಸಿದ್ದ ಮೊಬೈಲ್ಗಳ ಮಾಹಿತಿ ಹೊರತೆಗೆಯಲಿರುವ ಪೊಲೀಸರು