ಸಿಎಂ ಭರವಸೆಯ ನಂತರ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಿಂದ ವಿಷಯ ಖಚಿತಪಡಿಸಿಕೊಂಡ ರವಿಶೆಟ್ಟಿ ಬೈಂದೂರು

Updated on: Jul 23, 2025 | 7:53 PM

ನಮ್ಮ ವರದಿಗಾರ ಹೋರಾಟದ ನೇತೃತ್ವ ವಹಿಸಿದ್ದ ಕರ್ನಾಟಕ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿಶೆಟ್ಟಿ ಬೈಂದೂರು ಅವರೊಂದಿಗೂ ಮಾತಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆಯಿಂದ ಸಂತುಷ್ಟರಾಗದ ಬೈಂದೂರು, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ವಿಪುಲ್ ಬನ್ಸಲ್ ಅವರಿಗೆ ಫೋನ್ ಮಾಡಿ ಸಿಎಂ ಹೇಳಿದ್ದನ್ನು ಖಚಿತಪಡಿಸಿಕೊಂಡಿದ್ದಾರೆ. ಅದಾದ ನಂತರವೇ ಅವರು ಪ್ರತಿಭಟನೆ ವಾಪಸ್ಸು ಪಡೆದಿರುವ ಘೋಷಣೆ ಮಾಡುತ್ತಾರೆ.

ಬೆಂಗಳೂರು, ಜುಲೈ 23: ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಿಂದ (commercial tax department) ಜಾರಿಯಾಗುತ್ತಿದ್ದ ನೋಟೀಸ್ ಗಳಿಂದ ಹೌಹಾರಿದ್ದ ಸಣ್ಣ ಉದ್ದಿಮೆದಾರರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಡೆಸಿದ ಮೀಟಿಂಗ್ ನಂತರ ನಿರಾಳರಾಗಿದ್ದಾರೆ. ತೆರಿಗೆ ಇಲಾಖೆಯಿಂದ ಜಾರಿಯಾಗಿರುವ ತೆರಿಗೆ ನೋಟೀಸ್ ಗಳನ್ನು ವಾಪಸ್ಸು ಪಡೆಯುವ ಆಶ್ವಾಸನೆಯನ್ನು ಕಾಂಡಿಮೆಂಟ್ಸ್, ಬೇಕರಿ, ಟೀ ಸ್ಟಾಲ್ ನಡೆಸುವ ಮತ್ತು ಎಲ್ಲ ಸಣ್ಣ ಉದ್ದಿಮೆದಾರರಿಗೆ ಮುಖ್ಯಮಂತ್ರಿಯವರು ನೀಡಿರುವ ಕಾರಣ ಇವತ್ತಿನಿಂದ ಪ್ರತಿಭಟನೆ ಶುರುಮಾಡಿದ್ದ ವ್ಯಾಪಾರಿಗಳು ಅದನ್ನು ವಾಪಸ್ಸು ಪಡೆದಿದ್ದಾರೆ.

ಇದನ್ನೂ ಓದಿ:    ಕಮರ್ಷಿಯಲ್ ಟ್ಯಾಕ್ಸ್ ನೋಟೀಸ್​ಗಳ ವಿರುದ್ಧ ಇಂದಿನಿಂದ ಹೋರಾಟ ಆರಂಭಿಸಿದ ಸಣ್ಣ ವ್ಯಾಪಾರಿಗಳು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ