ಭಾರಿ ಮಳೆ ಇದ್ದರೂ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಬರೋಬ್ಬರಿ ಹೆಚ್ಚಳ: ವಿಡಿಯೋ ನೋಡಿ
ಹಂಪಿಯಲ್ಲೀಗ ಮುಂಗಾರು ಮಳೆಯ ಸಿಂಚನ. ಜೊತೆ ಜೊತೆಗೇ ಪ್ರವಾಸಿಗರ ಕಲರವ. ಮಳೆಯ ಮಧ್ಯೆಯೂ ಹಂಪಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ದಿನಾ ಸಾವಿರಾರು ಜನ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಬರುತ್ತಿದ್ದಾರೆ. ಮಳೆಯ ನಡುವೆಯೂ ಹಂಪಿಯಲ್ಲಿ ಪ್ರವಾಸಿಗರ ಸಂಭ್ರಮದ ಕ್ಷಣಗಳ ವಿಡಿಯೋ ಇಲ್ಲಿದೆ ನೋಡಿ.
ವಿಜಯನಗರ, ಜೂನ್ 10: ಮುಂಗಾರು ಮಳೆಯ (Monsoon Rain) ಆಗಮನದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಂಪಿಯಲ್ಲಿಯೂ (Hampi) ಎಡೆಬಿಡದೆ ಮಳೆ ಸುರಿಯುತ್ತಿದೆ. ಹಂಪಿ ಪ್ರದೇಶದಲ್ಲಿ ನಿರಂತರ ಮಳೆಯ ನಡುವೆಯೂ ಪ್ರವಾಸಿಗರ (Tourists) ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಮಳೆಯ ನಡುವೆಯೂ ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಹಂಪಿಯ ವಿಜಯ ವಿಠ್ಠಲ ದೇಗುಲ, ವಿರೂಪಾಕ್ಷ ದೇಗುಲ, ಕಲ್ಲಿನ ರಥ, ಸಾಸಿವೆ ಕಾಳು ಗಣಪ, ಸಾಲು ಮಂಟಪ ಸೇರಿದಂತೆ ವಿವಿಧ ಸ್ಮಾರಕಗಳ ವೀಕ್ಷಣೆಗೆ ಜನ ಮುಗಿಬೀಳುತ್ತಿದ್ದಾರೆ. ವರುಣನ ಸಿಂಚನದ ನಡೆಯೂ ಸ್ಮಾರಕಗಳ ಮುಂಭಾಗದಲ್ಲಿ ಪ್ರವಾಸಿಗರು ಸೆಲ್ಫೀ ತೆಗೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಛತ್ರಿ ಹಿಡಿದುಕೊಂಡೇ ಪ್ರವಾಸಿಗರು ಸ್ಮಾರಕಗಳನ್ನು ವೀಕ್ಷಿಸುತ್ತಿದ್ದಾರೆ.
ಸದ್ಯ ಮಳೆಯಿಂದಾಗಿ ನೀರಿನಲ್ಲಿ ಸ್ಮಾರಕಗಳ ಬಿಂಬ ಕಾಣಿಸುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿವೆ. ಕಳೆದ ಕೆಲವು ದಿನಗಳಿಂದ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಬರುತ್ತಿದ್ದಾರೆ.
ಇದನ್ನೂ ಓದಿ: ಪಾಟರಿ ಟೌನ್ ಮೆಟ್ರೋ ಸ್ಟೇಷನ್ಗೆ ಪುನೀತ್ ರಾಜ್ ಕುಮಾರ್ ಹೆಸರಿಡಲು ಮನವಿ: ಪಿಎಂ ಮೋದಿ ಕಚೇರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ