ಐಸಿಯುನಲ್ಲಿ ಚೆನ್ನಮ್ಮರ ಕೊನೆಕ್ಷಣಗಳು ಹೇಗಿತ್ತು? ಪುತ್ರಿ ಅನುಸೂಯ ಭಾವುಕ ಮಾತು

Edited By:

Updated on: Jul 19, 2026 | 1:54 PM

ಚನ್ನಮ್ಮನವರ ಅಂತಿಮ ಕ್ಷಣಗಳನ್ನು ಅವರ ಪುತ್ರಿ ಅನುಸೂಯಾ ಅವರು ಭಾವುಕವಾಗಿ ವಿವರಿಸಿದ್ದಾರೆ. ಮುತ್ತೈದೆಯಾಗಿ ತಮ್ಮ ತಾಯಿ ಅಗಲಿದ್ದು, ತಂದೆ ದೇವೇಗೌಡರು ಶಿವನ ರುದ್ರಾಭಿಷೇಕದ ತೀರ್ಥ, ಮಲ್ಲಿಗೆ ಹೂವು ಮತ್ತು ಗಂಧವನ್ನು ಇಟ್ಟು ಬೀಳ್ಕೊಟ್ಟ ಕ್ಷಣ ಸ್ಮರಣೀಯ ಎಂದಿದ್ದಾರೆ. ಚನ್ನಮ್ಮನವರು ನಿಸ್ವಾರ್ಥ ಸೇವೆ ಹಾಗೂ ಪೂಜೆಗಳಿಂದ ಪುಣ್ಯದ ಸಾವು ಪಡೆದಿದ್ದಾರೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಜುಲೈ 19: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮನವರ ಅಂತಿಮ ದರ್ಶನಕ್ಕೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಅವರ ಪುತ್ರಿ ಅನುಸೂಯಾ ಅವರು ತಮ್ಮ ತಾಯಿಯ ಅಂತಿಮ ಕ್ಷಣಗಳನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ. ನಮ್ಮ ತಾಯಿ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಶಕ್ತಿ ನಮ್ಮೆಲ್ಲರಲ್ಲೂ ಜೀವಂತವಾಗಿದೆ. ಯಾವುದೇ ಹೆಣ್ಣುಮಗಳು ಮುತ್ತೈದೆಯಾಗಿ ಸಾಯಬೇಕು ಎಂದು ಬಯಸುತ್ತಾರೆ. ನನ್ನ ತಾಯಿಗೆ ಆ ಭಾಗ್ಯ ಸಿಕ್ಕಿದೆ. ನಮ್ಮ ತಂದೆಯವರು ಬೆಳಗ್ಗೆ ಶಿವನಿಗೆ ರುದ್ರಾಭಿಷೇಕ ಮಾಡಿದ ತೀರ್ಥ, ಗಂಧ ಮತ್ತು ದೇವರ ಮಲ್ಲಿಗೆ ಹೂವನ್ನು ಕೈಯಾರೆ ತಾಯಿಗೆ ನೀಡಿದ್ದಾರೆ. ಅದೇ ಕ್ಷಣ ಅವರ ಜೀವ ಹೋಗಿದೆ. ಇಂತಹ ಸಾವು ಯಾರಿಗೂ ಸಿಗುವುದಿಲ್ಲ ಎಂದು ಹೇಳುತ್ತಲೇ ಅವರು ಕಣ್ಣೀರಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us