ದಶಕಗಳಿಂದ ದೇವೇಗೌಡರ ಕುಟುಂಬ ನಮ್ಮ ಕುಟುಂಬದೊಂದಿಗೆ ಹಗೆ ಸಾಧಿಸುತ್ತಿದೆ: ಡಿಕೆ ಸುರೇಶ್

|

Updated on: Apr 12, 2024 | 2:24 PM

ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ, ಎಲ್ಲ ಸಮುದಾಯಗಳನ್ನು ಜೊತೆಯಾಗಿ ಕರೆದೊಯ್ಯುವ ಜವಾಬ್ದಾರಿ ಅವರ ಮೇಲಿದೆ. ಕುಮಾರಸ್ವಾಮಿ ಅವರು ಹೇಳೋದೆಲ್ಲ ಸತ್ಯವೇ? ಅಸಲಿಗೆ ದೇವೇಗೌಡರ ಕುಟುಂಬಕ್ಕೆ ದಶಕಗಳಿಂದ ಶಿವಕುಮಾರ್ ಕುಟುಂಬದೊಂದಿಗೆ ಹಗೆತನವಿದೆ, ಅದರೆ ತಮ್ಮ ಕುಟುಂಬ ಯಾವತ್ತೂ ಹಗೆ ಸಾಧಿಸಿಲ್ಲ, ಅವರು ಅಧಿಕಾರದಲ್ಲಿದ್ದಾಗ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ ಎಂದು ಸುರೇಶ್ ಹೇಳಿದರು

ರಾಮನಗರ: ಡಿಕೆ ಶಿವಕುಮಾರ್ (DK Shivakumar) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy)-ಇಬ್ಬರೂ ಒಕ್ಕಲಿಗ ಸುಮದಾಯದವರು (Vokkaliga community) ಮತ್ತು ಎರಡು ಬೇರೆ ಬೇರೆ ಪಕ್ಷಗಳ ರಾಜ್ಯಾಧ್ಯಕ್ಷರು. ತಾನೇ ಪ್ರಬಲ ಒಕ್ಕಲಿಗ ನಾಯಕ ಅಂತ ಸಾಧಿಸಲು ಅವರ ನಡುವೆ ಪೈಪೋಟಿ ನಡೆಯುತ್ತಿದೆಯೇ? ಎಂದು ಡಿಕೆ ಸುರೇಶ್ ರನ್ನು ಕೇಳಿದಾಗ ಅವರು, ಒಕ್ಕಲಿಗ ನಾಯಕತ್ವ ಯಾರದೇ ಸೊತ್ತಲ್ಲ, ಇಲ್ಲಿರೋದು ಒಕ್ಕಲಿಗ ಸಮುದಾಯ ನಾಯಕತ್ವದ ಪ್ರಶ್ನೆ ಅಲ್ಲ, ಒಕ್ಕಲಿಗರು ಸ್ವಾಭಿಮಾನಿಗಳು ಮತ್ತು ಯಾವ ಸರ್ಕಾರಕ್ಕೆ ಬೆಂಬಲಿಸಬೇಕು ಅನ್ನೋದನ್ನು ಚೆನ್ನಾಗಿ ತಿಳಿದಿದ್ದಾರೆ ಎಂದ ಸುರೇಶ್; ನಿನ್ನೆ ಶಿವಕುಮಾರ್ ಹೇಳಿದ್ದು, ಹಿಂದೆ ತಮ್ಮ ಸರ್ಕಾರ ಪತನವಾಗಲು ಕಾರಣರಾದವರನ್ನು ಶ್ರೀಗಳ ಬೇಟಿಗೆ ಕರೆದೊಯ್ದ ವಿಚಾರವನ್ನು, ಎಂದರು. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ, ಎಲ್ಲ ಸಮುದಾಯಗಳನ್ನು ಜೊತೆಯಾಗಿ ಕರೆದೊಯ್ಯುವ ಜವಾಬ್ದಾರಿ ಅವರ ಮೇಲಿದೆ. ಕುಮಾರಸ್ವಾಮಿ ಅವರು ಹೇಳೋದೆಲ್ಲ ಸತ್ಯವೇ? ಅಸಲಿಗೆ ದೇವೇಗೌಡರ ಕುಟುಂಬಕ್ಕೆ ದಶಕಗಳಿಂದ ಶಿವಕುಮಾರ್ ಕುಟುಂಬದೊಂದಿಗೆ ಹಗೆತನವಿದೆ, ಅದರೆ ತಮ್ಮ ಕುಟುಂಬ ಯಾವತ್ತೂ ಹಗೆ ಸಾಧಿಸಿಲ್ಲ, ಅವರು ಅಧಿಕಾರದಲ್ಲಿದ್ದಾಗ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ, ನಮ್ಮ ಹೇಳಿಕೆಗಳನ್ನು ಅವರು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದರೆ ತಾವೇನೂ ಮಾಡಲಾಗಲ್ಲ ಎಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ನನಗಿದು ಮೂರನೇ ಜನ್ಮ, ವರ್ಷದೊಳಗೆ ನಿಮ್ಮ ಸೇವೆಗೆ ಮತ್ತೊಂದು ಅವಕಾಶ ದೊರೆಯಲಿದೆ: ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ