ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಶಿವಕುಮಾರ್ ತಡರಾತ್ರಿ ಕಾರ್ಯಾಚರಣೆ: ಕಾಂಗ್ರೆಸ್ ಸೇರಿದ 300 ಜೆಡಿಎಸ್ ಕಾರ್ಯಕರ್ತರು
ಡಿಕೆ ಶಿವಕುಮಾರ್ ತಡರಾತ್ರಿ ಕಾರ್ಯಾಚರಣೆಗೆ ಜೆಡಿಎಸ್ ಕೆಂಡಾಮಂಡಲವಾಗಿದೆ. ಇದೆಲ್ಲಾ ಗಿಮಿಕ್ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, ಕಾಂಗ್ರೆಸಿಗರಿಗೆ, ಅದರಲ್ಲೂ ಡೂಪ್ಲಿಕೇಟ್ ಸಿಎಂ ಡಿಕೆ ಶಿವಕುಮಾರ್ಗೆ ಸೋಲಿನ ಭೀತಿ ಎಷ್ಟರಮಟ್ಟಿಗೆ ಕಾಡುತ್ತಿದೆ ಎಂದರೆ, ಯುವ ಕಾಂಗ್ರೆಸ್ ಕಾರ್ಯಕರ್ತರಿಗೇ ಕಾಂಗ್ರೆಸ್ ಶಾಲು ಹಾಕಿ, ಅವರನ್ನು ಜೆಡಿಎಸ್ ಕಾರ್ಯಕರ್ತರು ಎಂದು ಬಿಂಬಿಸಿ, ಅವರೆಲ್ಲ ಕಾಂಗ್ರೆಸ್ ಸೇರಿದ್ದಾರೆ ಎಂದು ಪ್ರಚಾರ ಪಡೆಯುತ್ತಿದ್ದಾರೆ ಎಂದಿದೆ.
ಬೆಂಗಳೂರು, ಏಪ್ರಿಲ್ 12: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ (Bangalore Rural) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಖೆಡ್ಡಾ ತೋಡಿದ್ದಾರೆ. ಒಕ್ಕಲಿಗ ಅಸ್ತ್ರ ಹೂಡಿ, ದಳಪತಿಗಳ ಸಾಮ್ರಾಜ್ಯವನ್ನೇ ಶೇಕ್ ಮಾಡಿದ್ದ ಡಿಕೆ ಶಿವಕುಮಾರ್, ಗುರುವಾರ ತಡರಾತ್ರಿ ಆಪರೇಷನ್ ಹಸ್ತದ ಮೂಲಕ ಮತ್ತೆ ಶಾಕ್ ಕೊಟ್ಟಿದ್ದಾರೆ. ತಮ್ಮ ಡಿಕೆ ಸುರೇಶ್ ಗೆಲುವಿಗಾಗಿ ರಾತ್ರೋರಾತ್ರಿ ಆಪರೇಷನ್ ಮಾಡಿರುವ ಡಿಕೆ ಶಿವಕುಮಾರ್, 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಂಸದ ಡಿ.ಕೆ ಸುರೇಶ್ ಗೆಲುವಿಗೆ ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಡಿಕೆ ಶಿವಕುಮಾರ್ ಚನ್ನಪಟ್ಟಣದಲ್ಲೇ ಹೆಚ್‌ಡಿಕೆಗೆ ಶಾಕ್ ಕೊಟ್ಟಿದ್ದಾರೆ. ಅಕ್ಕೂರು ದೊಡ್ಡಿ ಶಿವಣ್ಣ ಸೇರಿ 300ಕ್ಕೂ ಹೆಚ್ಚು ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಖುದ್ದು ಡಿಕೆ ಅವರೇ ಕಾಂಗ್ರೆಸ್ ಧ್ವಜ ನೀಡಿ ದಳ ಮುಖಂಡರನ್ನು ಸ್ವಾಗತಿಸಿದ್ದಾರೆ. ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಇವರೆಲ್ಲಾರು ಪಕ್ಕಾ ಕುಮಾರಸ್ವಾಮಿ ಬೆಂಬಲಿಗರು. ಪ್ರತಿದಿನ ಸಾವಿರಾರು ಜನ ಕಾಂಗ್ರೆಸ್ ಸೇರ್ತಿದ್ದಾರೆ ಎಂದರು.
ಹೆಚ್‌ಡಿಕೆ ವಿರುದ್ಧ ಮತ್ತೊಂದು ದಾಳ ಉರುಳಿಸಿದ ಡಿಕೆ, ಕುಮಾರಸ್ವಾಮಿ ಚನ್ನಪಟ್ಟಣದ ಕಾರ್ಯಕರ್ತರನ್ನು ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಮಂಡ್ಯದಲ್ಲೂ ಅವರು ಗೆಲ್ಲುವುದಿಲ್ಲ. ಅಲ್ಲದೇ, ಜೆಡಿಎಸ್ಗಾಗಿ ನಿಮ್ಮ ಟೈಮ್ ವೇಸ್ಟ್ ಮಾಡ್ಕೋಬೇಡಿ. ನಮ್ಮ ಜೊತೆಗೆ ಬನ್ನಿ, ನಿಮ್ಮ ಜೊತೆಗೆ ನಾನು ಇರುತ್ತೇನೆ ಎಂದು ದಳ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ತಡರಾತ್ರಿ ಕಾರ್ಯಾಚರಣೆಗೆ ಜೆಡಿಎಸ್ ಕೆಂಡಾಮಂಡಲ
ಡಿಕೆ ಶಿವಕುಮಾರ್ ತಡರಾತ್ರಿ ಕಾರ್ಯಾಚರಣೆಗೆ ಜೆಡಿಎಸ್ ಕೆಂಡಾಮಂಡಲವಾಗಿದೆ. ಇದೆಲ್ಲಾ ಗಿಮಿಕ್ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗೆ ನೆರವಾದೀತೇ ಕುಮಾರಸ್ವಾಮಿ ಪ್ರಭಾವ? ಬಲಾಬಲ ಲೆಕ್ಕಾಚಾರ ಇಲ್ಲಿದೆ
ಕಾಂಗ್ರೆಸ್ ಕಾರ್ಯಕರ್ತರಿಗೇ ಶಾಲು ಹಾಕಿ ನಾಟಕ: ಜೆಡಿಎಸ್
ಕಾಂಗ್ರೆಸಿಗರಿಗೆ, ಅದರಲ್ಲೂ ಡೂಪ್ಲಿಕೇಟ್ ಸಿಎಂ @DKShivakumar ಅವರಿಗೆ ಸೋಲಿನ ಭೀತಿ ಎಷ್ಟರಮಟ್ಟಿಗೆ ಕಾಡುತ್ತಿದೆ ಎಂದರೆ, ಯುವ ಕಾಂಗ್ರೆಸ್ ಕಾರ್ಯಕರ್ತರಿಗೇ ಕಾಂಗ್ರೆಸ್ ಶಾಲು ಹಾಕಿ, ಅವರನ್ನು ಜೆಡಿಎಸ್ ಕಾರ್ಯಕರ್ತರು ಎಂದು ಬಿಂಬಿಸಿ, ಅವರೆಲ್ಲ ಕಾಂಗ್ರೆಸ್ ಸೇರಿದ್ದಾರೆ ಎಂದು ಪ್ರಚಾರ ಪಡೆಯುತ್ತಿದ್ದಾರೆ.
ಸೋಲಿನ ಭೀತಿ, ಹತಾಶೆ ಎಂತೆಂತಹ… pic.twitter.com/P8Zl1AJS00
— Janata Dal Secular (@JanataDal_S) April 12, 2024
ಕಾಂಗ್ರೆಸಿಗರಿಗೆ, ಅದರಲ್ಲೂ ಡೂಪ್ಲಿಕೇಟ್ ಸಿಎಂ ಡಿಕೆ ಶಿವಕುಮಾರ್ಗೆ ಸೋಲಿನ ಭೀತಿ ಎಷ್ಟರಮಟ್ಟಿಗೆ ಕಾಡುತ್ತಿದೆ ಎಂದರೆ, ಯುವ ಕಾಂಗ್ರೆಸ್ ಕಾರ್ಯಕರ್ತರಿಗೇ ಕಾಂಗ್ರೆಸ್ ಶಾಲು ಹಾಕಿ, ಅವರನ್ನು ಜೆಡಿಎಸ್ ಕಾರ್ಯಕರ್ತರು ಎಂದು ಬಿಂಬಿಸಿ, ಅವರೆಲ್ಲ ಕಾಂಗ್ರೆಸ್ ಸೇರಿದ್ದಾರೆ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಸೋಲಿನ ಭೀತಿ, ಹತಾಶೆ ಎಂತೆಂತಹ ಗಿಮಿಕ್ಗಳನ್ನು ಮಾಡಿಸುತ್ತದೆ ಎನ್ನುವುದಕ್ಕೆ ಇದು ಜೀವಂತ ಸಾಕ್ಷಿ ಎಂದು ಜೆಡಿಎಸ್ ಟೀಕಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Fri, 12 April 24