ರಾಜಣ್ಣ ಮತ್ತು ಕಾಂಗ್ರೆಸ್ ನಾಯಕ ಕುತಂತ್ರದಿಂದಲೇ ದೇವೇಗೌಡರು ತುಮಕೂರಿನಲ್ಲಿ ಸೋತರು: ಹೆಚ್ ಡಿ ಕುಮಾರಸ್ವಾಮಿ
ಇವರ ಕುತಂತ್ರದಿಂದಲೇ ದೇವೇಗೌಡರು ಸೋತು ಮಾನಸಿಕ ಆಘಾತಕ್ಕೊಳಗಾದರು. ಅಗಿಂದಲೇ ಅವರ ಅರೋಗ್ಯ ಸರಿಯಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ರಾಜಣ್ಣನನ್ನು ರಾಜಕೀಯಕ್ಕೆ ತಂದಿದ್ದೇ ದೇವೇಗೌಡರು ಅಂತ ಮಾಜಿ ಮುಖ್ಯಮಂತ್ರಿ ಹೇಳಿದರು.
Bengaluru: ಹೆಚ್ ಡಿ ದೇವೇಗೌಡರ (HD Devegowda) ಬಗ್ಗೆ ಅಪಬದ್ಧವಾಗಿ ಮಾತಾಡಿರುವ ಕಾಂಗ್ರೆಸ್ ಶಾಸಕ ಕೆ ಎನ್ ರಾಜಣ್ಣ (KN Rajanna) ಜೆಡಿಸ್ ಪಿತಾಮಹರ ಮಕ್ಕಳಿಂದ ತರಾಟೆಗೊಳಗಾಗುತ್ತಿದ್ದಾರೆ. ಹಾಸನದಲ್ಲಿ ಹೆಚ್ ಡಿ ರೇವಣ್ಣನ ಅವರು ರಾಜಣ್ಣರನ್ನು ಖಂಡಿಸಿದ ಬಳಿಕ ಬೆಂಗಳೂರಲ್ಲಿ ಗೌಡರ ಇನ್ನೊಬ್ಬ ಮಗ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಕಾಂಗ್ರೆಸ್ ಶಾಸಕರ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ್ದಾರೆ. ದೇವೇಗೌಡರು ಬೇರೆಯವರ ಹೆಗಲ ಮೇಲೆ ಕೈ ಹಾಕಿ ನಡೆಯುತ್ತಿರುವುದಕ್ಕೆ ರಾಜಣ್ಣ ಮತ್ತು ಕಾಂಗ್ರೆಸ್ ಕಾರಣ ಎಂದು ಅವರು ಹೇಳಿದರು. ಇವರ ಕುತಂತ್ರದಿಂದಲೇ ದೇವೇಗೌಡರು ಸೋತು ಮಾನಸಿಕ ಆಘಾತಕ್ಕೊಳಗಾದರು. ಅಗಿಂದಲೇ ಅವರ ಅರೋಗ್ಯ ಸರಿಯಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ರಾಜಣ್ಣನನ್ನು ರಾಜಕೀಯಕ್ಕೆ ತಂದಿದ್ದೇ ದೇವೇಗೌಡರು ಅಂತ ಮಾಜಿ ಮುಖ್ಯಮಂತ್ರಿ ಹೇಳಿದರು.
ಇದನ್ನೂ ಓದಿ: Viral Video: ಕೊಳದಲ್ಲಿ ಸರಳ ರೇಖೆ ಎಳೆದ ಬಾತುಕೋಳಿ, ನೆಟ್ಟಿಗರ ಮನಸ್ಸನ್ನು ಪ್ರಶಾಂತಗೊಳಿಸುವಂತಿದೆ ಈ ವಿಡಿಯೋ