ಮಾಸ್ಕ್ ಮ್ಯಾನ್ ಅರೆಸ್ಟ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ಬರುವವರ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ
ನೂರಾರು ಶವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಧಮಸ್ಥಳ ಕ್ಷೇತ್ರದ ಬಗ್ಗೆ ಬೇರೆ ಬೇರೆ ರೀತಿಯ ಸುದ್ದಿ ಹರಿದಾಡಿದ್ದವು. ಆದ್ರೆ, ಇದೀಗ ಉತ್ಖನನ ವೇಳೆ ಏನು ಸಿಗದ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಮಾಸ್ಕ್ ಮ್ಯಾನ್ ಚಿನ್ನಯ್ಯ ನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಯಾವಾಗ ಚಿನ್ನಯ್ಯ ಮಾಡಿದ್ದ ಆರೋಪದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗದಿದ್ದರಿಂದ ಭಕ್ತರು ನಿಟ್ಟುಸಿರು ಬಿಟ್ಟಿದ್ದು, ಇದೀಗ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹರಿದುಬರುತ್ತಿದ್ದಾರೆ.
ಮಂಗಳೂರು, (ಆಗಸ್ಟ್ 24): ಧರ್ಮಸ್ಥಳದ ಸುತ್ತಮುತ್ತ ನೂರಾರು ಶವ ಹೂತು ಹಾಕಿರುವುದಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಆರೋಪ ಮಾಡಿ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಕಳೆದ ಐದಿನೈದು ದಿನಗಳಿಂದ ಉತ್ಖನನ ಮಾಡಿದೆ. ಆದ್ರೆ, ಅಂದಿನಿಂದ ಧರ್ಮಸ್ಥಳಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಕಡಿಮೆಯಾಗಿತ್ತು. ನೂರಾರು ಶವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಧಮಸ್ಥಳ ಕ್ಷೇತ್ರದ ಬಗ್ಗೆ ಬೇರೆ ಬೇರೆ ರೀತಿಯ ಸುದ್ದಿ ಹರಿದಾಡಿದ್ದವು. ಆದ್ರೆ, ಇದೀಗ ಉತ್ಖನನ ವೇಳೆ ಏನು ಸಿಗದ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಮಾಸ್ಕ್ ಮ್ಯಾನ್ ಚಿನ್ನಯ್ಯ ನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಯಾವಾಗ ಚಿನ್ನಯ್ಯ ಮಾಡಿದ್ದ ಆರೋಪದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗದಿದ್ದರಿಂದ ಭಕ್ತರು ನಿಟ್ಟುಸಿರು ಬಿಟ್ಟಿದ್ದು, ಇದೀಗ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹರಿದುಬರುತ್ತಿದ್ದಾರೆ.
