ಸಮುದ್ರದಾಳದಲ್ಲಿ ಪತ್ನಿಗೆ ಪ್ರಪೋಸ್ ಮಾಡಿದ ಧನರಾಜ್; ವಿಡಿಯೋ ವೈರಲ್

Updated on: Apr 17, 2026 | 8:59 AM

ನಟ ಧನರಾಜ್ ಅವರು ಪತ್ನಿಗೆ ಪ್ರಪೋಸ್ ಮಾಡಿದ್ದಾರೆ. ಅದು ಕೂಡ ಸಮುದ್ರಾದಳದಲ್ಲಿ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಜೋಡಿ ನಂಬರ್ 1 ಶೋನ ಭಾಗವಾಗಿ ಧನರಾಜ್ ಅವರು ಈ ರೀತಿ ಪ್ರಪೋಸ್ ಮಾಡಿದ್ದಾರೆ ಅನ್ನೋದು ವಿಶೇಷ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. 

ಧನರಾಜ್ ಹಾಗೂ ಪ್ರಜ್ಞಾ ದಂಪತಿ ಈಗ ‘ಜೋಡಿ ನಂಬರ್ 1’ ಶೋನ ಭಾಗ ಆಗಿದ್ದಾರೆ. ಧನರಾಜ್​ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು ಬಿಗ್ ಬಾಸ್. ಅತಿಥಿಯಾಗಿ ಅವರ ಪತ್ನಿ ಆಗಮಿಸಿದ್ದರು. ಇಬ್ಬರ ಬಾಂಧವ್ಯ ಗಮನ ಸೆಳೆದಿತ್ತು. ಈ ಕಾರಣಕ್ಕೆ ಜೋಡಿ ನಂಬರ್ 1 ಶೋಗೆ ಅವರಿಗೆ ಅವಕಾಶ ಸಿಕ್ಕಿದೆ. ಧನರಾಜ್​ ಅವರು ನೇತ್ರಾಣಿ ಐಲ್ಯಾಂಡ್ ಬಳಿ ಪತ್ನಿಯನ್ನು ಕರೆದುಕೊಂಡು ಹೋಗಿ, ಸಮುದ್ರಾದಳದಲ್ಲಿ ಪ್ರಪೋಸ್ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Apr 17, 2026 08:58 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More