ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್ ಖಡಕ್ ಮಾತು
ಇತ್ತೀಚೆಗೆ ಝೈದ್ ಖಾನ್ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದರು. ಆಗ ಅವರು ನೀಡಿದ ಹೇಳಿಕೆ ವೈರಲ್ ಆಯಿತು. ಧನ್ವೀರ್ ಗೌಡಗೆ ದರ್ಶನ್ ಜೈಲಿನಿಂದಲೇ ಎಚ್ಚರಿಕೆ ನೀಡಿದ್ದಾರೆ ಎಂದು ಝೈದ್ ಖಾನ್ ತಿಳಿಸಿದ್ದರು. ಅದಕ್ಕೆ ಧನ್ವೀರ್ ಪರ ವಕೀಲ ಪ್ರಜ್ವಲ್ ಪ್ರತಿಕ್ರಿಯೆ ನೀಡಿದ್ದಾರೆ.
ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ದರ್ಶನ್ ನಡುವೆ ಮನಸ್ತಾಪ ಆಗಿದೆ. ಆ ಬಳಿಕ ನಟ ಝೈದ್ ಖಾನ್ ಅವರು ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದರು. ಆಗ ಅವರು ನೀಡಿದ ಹೇಳಿಕೆ ವೈರಲ್ ಆಯಿತು. ಧನ್ವೀರ್ ಗೌಡಗೆ ದರ್ಶನ್ ಅವರು ಜೈಲಿನಿಂದಲೇ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎಂದು ಝೈದ್ ಖಾನ್ ತಿಳಿಸಿದ್ದರು. ಅದಕ್ಕೆ ಧನ್ವೀರ್ ಗೌಡ ಪರ ವಕೀಲರಾದ ಪ್ರಜ್ವಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಜೈಲಿನಿಂದ, ಅಲ್ಲಿ ಇಲ್ಲಿ ಮಾತನಾಡಿದ್ದಾರೆ ಎಂಬ ಅಂತೆ-ಕಂತೆ ಸುದ್ದಿ ಹರಿದಾಡುತ್ತಿದೆ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ. 2017ರಲ್ಲಿ ಧನ್ವೀರ್ ಅವರು ದರ್ಶನ್ ಅವರಿಗೆ ಪರಿಚಯ ಆದರು. ಅಂದಿನಿಂದ ಇಂದಿನವರೆಗೆ ಧನ್ವೀರ್ ಅವರ ನಿಷ್ಠೆ, ನಿಯತ್ತು ಇದೆ. ಮುಂದೆಯೂ ಇರುತ್ತದೆ. ಅದರ ಬಗ್ಗೆ ಯಾವುದೇ ಗೊಂದಲ ಬೇಡ. ತನಿಖಾಧಿಕಾರಿಗಳು ಕಳಿಸಿದ ನೋಟಿಸ್ಗೆ ನಾವು ಉತ್ತರ ನೀಡುತ್ತೇವೆ. ಅದರಲ್ಲಿ ಇರುವುದು ಸುಳ್ಳು ಆರೋಪಗಳು ಮಾತ್ರ’ ಎಂದು ವಕೀಲ ಪ್ರಜ್ವಲ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
