‘ವಾಮನ’ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್ ಗೌಡ
ಧನ್ವೀರ್ ಗೌಡ ಮತ್ತು ದರ್ಶನ್ ಅವರು ಆಪ್ತರಾಗಿದ್ದಾರೆ. ಎರಡೂ ಕುಟುಂಬದ ನಡುವೆ ಒಡನಾಟ ಹೆಚ್ಚಾಗಿದೆ. ಧನ್ವೀರ್ ಗೌಡ ಅಭಿನಯಿಸಿದ ‘ವಾಮನ’ ಸಿನಿಮಾದ ಪ್ರೀಮಿಯರ್ ಶೋಗೆ ದರ್ಶನ್ ಬಂದಿದ್ದಾರೆ. ಆದರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಿನಿಮಾ ನೋಡಲು ಬಂದಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಧನ್ವೀರ್ ಗೌಡ ತಿಳಿದ್ದಾರೆ.
ದರ್ಶನ್ ಹಾಗೂ ಧನ್ವೀರ್ ಗೌಡ (Dhanveer Gowda) ಅವರು ಆಪ್ತರಾಗಿದ್ದಾರೆ. ಅವರಿಬ್ಬರ ಕುಟುಂಬದ ನಡುವೆ ಒಡನಾಟ ಕೂಡ ಹೆಚ್ಚಾಗಿದೆ. ಧನ್ವೀರ್ ಗೌಡ ನಟಿಸಿದ ‘ವಾಮನ’ (Vaamana) ಸಿನಿಮಾದ ಪ್ರೀಮಿಯರ್ ಶೋಗೆ ದರ್ಶನ್ (Darshan) ಅವರು ಬಂದಿದ್ದಾರೆ. ಆದರೆ ಅವರ ಜೊತೆ ಪತ್ನಿ ವಿಜಯಲಕ್ಷ್ಮಿ ಅವರು ಸಿನಿಮಾ ನೋಡಲು ಬಂದಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಈಗ ಧನ್ವೀರ್ ಗೌಡ ತಿಳಿದ್ದಾರೆ. ‘ಅಕ್ಕ ಎಲ್ಲೋ ಹೊರಗಡೆ ಹೋಗಿದ್ದರು. ವಾಪಸ್ ಬರುವುದು ತಡ ಆಯಿತು. ಹಾಗಾಗಿ ಸಿನಿಮಾಗೆ ಬಂದಿಲ್ಲ. ಇಲ್ಲದಿದ್ದರೆ ಖಂಡಿತಾ ಬರುತ್ತಿದ್ದರು’ ಎಂದು ಧನ್ವೀರ್ ಗೌಡ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.