ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಧಾರವಾಡದ ಸೈದಾಪುರದ ಜಿಮ್‌ಗೆ ಕೋತಿಯೊಂದು ನುಗ್ಗಿ, ಅಲ್ಲಿ ವ್ಯಾಯಾಮ ಮಾಡುತ್ತಿದ್ದ ಯುವಕರನ್ನು ಹೆದರಿಸಿದೆ. ಕೋತಿಯ ಅನಿರೀಕ್ಷಿತ ಆಗಮನದಿಂದ ಭಯಭೀತರಾದ ಯುವಕರು ಜಿಮ್‌ನಿಂದ ಹೊರಗೆ ಓಡಿಹೋಗಿದ್ದಾರೆ. ಕೋತಿ ಜಿಮ್ ಪರಿಕರಗಳ ಮೇಲೆ ಆಟವಾಡಿ, ಕೆಲವರನ್ನು ಅಟ್ಟಿಸಿಕೊಂಡು ಹೋಗಿದೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಧಾರವಾಡ, ಡಿಸೆಂಬರ್ 21: ಕೋತಿಯೊಂದು ಜಿಮ್‌ಗೆ (gym) ನುಗ್ಗಿದ ಪರಿಣಾಮ ಯುವಕರು ಹೌಹಾರಿ ಹೊರ ಓಡಿರುವಂತಹ ಘಟನೆ ಧಾರವಾಡದ ಸೈದಾಪುರದ ಕಿಂಗ್‌ಡಮ್ ಜಿಮ್ನಲ್ಲಿ ನಡೆದಿದೆ. ಮೊದಲ ಮಹಡಿಯಲ್ಲಿರುವ ಜಿಮ್‌ಗೆ ನೇರವಾಗಿ ಒಂಟಿ ಕೋತಿ ಒಳಗೆ ಬಂದಿದೆ. ಕೋತಿ ಬರುತ್ತಿದ್ದಂತೆಯೇ ಹೌಹಾರಿದ ಯುವಕರು, ಹೊರಗೆ ಓಡಿಸಲು ಶತಪ್ರಯತ್ನ ಮಾಡಿದ್ದಾರೆ. ತನ್ನ ಓಡಿಸುವವರನ್ನೇ ಕೋತಿ ಹೊರಗೆ ಓಡಿಸಿದೆ. ಬಳಿಕ ಕೆಲವರನ್ನು ಅಟ್ಟಿಸಿದ್ದು, ಕೋತಿಯ ಆಟೋಟೋಪದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 21, 2024 06:57 PM