ದಿಗಂತ್ ನನ್ನೊಂದಿಗೆ ಮಾತಾಡುವಾಗ ಸಹಜವಾಗಿದ್ದ, ಗಾಬರಿಗೊಂಡಂತೆ ಅನಿಸಲಿಲ್ಲ: ಸುಜಾತಾ, ದಿಗಂತ್ ಅಮ್ಮ

Updated on: Mar 08, 2025 | 8:31 PM

ದಿಗಂತ್ ನಾಪತ್ತೆಯಾದಾಗಿನಿಂದ ಗಾಬರಿ, ಭಯ ಮತ್ತು ಆತಂಕದಲ್ಲಿದ್ದ ಸುಜಾತಾ ಅವರಿಗೆ ಮಗನ ಫೋನ್ ಬಂದಾಗ ಖುಷಿಯಿಂದ ಏನು ಮಾತಾಡಬೇಕೆಂದು ತೋಚಿಲ್ಲ, ತಮ್ಮ ಭಾವನ ಮಗನಿಗೆ ಫೋನ್ ಕೊಟ್ಟು ಮಾತಾಡಲು ಹೇಳಿದ್ದಾರೆ. ಪೊಲೀಸರು ಸಹ ದಿಗಂತ್ ಅಮ್ಮನ ಜೊತೆ ಮಾತಾಡಿದ್ದಾರೆ. ದಿಗಂತ್ ಸ್ವಇಚ್ಛೆಯಿಂದ ಉಡುಪಿಗೆ ಬಂದಿಲ್ಲ ತನ್ನನ್ನು ಕರೆತರಲಾಗಿದೆ ಎಂದನಂತೆ.

ಮಂಗಳೂರು, ಮಾರ್ಚ್ 8: ಕಳೆದ 12 ದಿನಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ಬಂಟ್ವಾಳ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್, ಉಡುಪಿಯ ಡಿ ಮಾರ್ಟ್ ಶಾಪಿಂಗ್ ಮಾಲ್​ನಲ್ಲಿ ಪತ್ತೆಯಾದ ನಂತರ ಅದೇ ಮಾಲ್​ನ ಸಿಬ್ಬಂದಿಯೊಬ್ಬರ ಫೋನಿಂದ ಎಲ್ಲರಿಗಿಂತ ಮುಂಚೆ ತನ್ನಮ್ಮನಿಗೆ ಕಾಲ್ ಮಾಡಿದ್ದಾನೆ. ನಮ್ಮ ಮಂಗಳೂರು ಪ್ರತಿನಿಧಿ ದಿಗಂತ್ ಅಮ್ಮ ಸುಜಾತಾ ಅವರೊಂದಿಗೆ ಮಾತಾಡಿದ್ದಾರೆ. ದಿಗಂತ್ ತನ್ನಮ್ಮನೊಂದಿಗೆ ಮಾತಾಡುವಾಗ ಸಹಜವಾದ ಧ್ವನಿಯಲ್ಲೇ ಮಾತಾಡಿದನಂತೆ, ಅವನು ಗಾಬರಿಯಾಗಿದ್ದ ಅಂತ ಅನಿಸಲಿಲ್ಲ ಎಂದು ಸುಜಾತಾ ಹೇಳುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಗಳೂರು ವಿದ್ಯಾರ್ಥಿ ನಾಪತ್ತೆ: ಮಂಗಳಮುಖಿಯರ ಜೊತೆ ಹೋದ್ನಾ ದಿಗಂತ? ಸಹೋದರ ಹೇಳಿದ್ದಿಷ್ಟು