ಹೆಣ್ಮಕ್ಕಳ ಬಗ್ಗೆ ಮಾತಾಡುವಾಗ ತೂಕವಾಗಿ ಮಾತಾಡಬೇಕು: ದರ್ಶನ್ ಕೇಸ್ ಬಗ್ಗೆ ಜೋಗಿ ಪ್ರೇಮ್ ಪ್ರತಿಕ್ರಿಯೆ
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲಿನಲ್ಲಿದ್ದಾರೆ. ಅವರನ್ನು ಹೊರತರುವುದು ಪತ್ನಿ ವಿಜಯಲಕ್ಷ್ಮಿ ಅವರಿಗೆ ಇಷ್ಟ ಇಲ್ಲ ಎಂದು ಕೆಲವರು ಇತ್ತೀಚೆಗೆ ಆರೋಪ ಮಾಡಿದ್ದರು. ಆ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಅವರು ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲಿನಲ್ಲಿದ್ದಾರೆ. ಅವರನ್ನು ಹೊರತರುವುದು ಪತ್ನಿ ವಿಜಯಲಕ್ಷ್ಮಿ ಅವರಿಗೆ ಇಷ್ಟವಿಲ್ಲ ಎಂದು ಧನ್ವೀರ್ ಗೌಡ ಅವರು ಆರೋಪ ಮಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಆ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಅವರು ಮಾತನಾಡಿದ್ದಾರೆ. ‘ನಾವು ಅವರ ವೈಯಕ್ತಿಕ ವಿಚಾರಗಳನ್ನು ಮಾತನಾಡುವುದು ಸರಿಯಲ್ಲ. ಅವರ ಕಷ್ಟ, ನೋವು ಏನು ಎಂಬುದು ಅವರಿಗೇ ಗೊತ್ತಿರುತ್ತದೆ. ನನ್ನನ್ನು ಸೇರಿದಂತೆ ಯಾರೇ ಆಗಲಿ, ಹೆಣ್ಮಕ್ಕಳ ಬಗ್ಗೆ ಮಾತನಾಡುವಾಗ ತೂಕವಾಗಿ ಮಾತನಾಡಿದರೆ ಚೆಂದ. ಅವರವರ ನಡುವೆ ಏನು ಆಗಿದೆಯೋ ಗೊತ್ತಿಲ್ಲ. ಇದರಿಂದ ಯಾವುದೇ ಕಾರಣಕ್ಕೂ ದರ್ಶನ್ ಅವರಿಗೆ ತೊಂದರೆ ಆಗದಿದ್ದರೆ ಸಾಕು. ಗಂಡ, ಹೆಂಡತಿ, ಮಗ ತುಂಬಾ ಚೆನ್ನಾಗಿ ಇದ್ದಾರೆ. ಅದು ನನಗೆ ಗೊತ್ತಿದೆ. ತುಂಬಾ ಹತ್ತಿರದ ಸ್ನೇಹಿತರು ಅವರು. ಇನ್ನೊಬ್ಬರ ಬಗ್ಗೆ ಮಾತನಾಡುವುದಕ್ಕೂ ಮುನ್ನ ನಾವು ಏನು ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಜೋಗಿ ಪ್ರೇಮ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
