ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್

Updated on: Sep 03, 2025 | 7:38 PM

‘ಪ್ರಪಂಚದಲ್ಲಿ ನಡೆಯುವ ಎಲ್ಲವನ್ನೂ ಮಾಧ್ಯಮದವರು ತೋರಿಸುತ್ತಾರೆ. ಒಳ್ಳೆಯದು, ಕೆಟ್ಟದ್ದು ನಿರ್ಧಾರ ಮಾಡುವುದು ಜನರಿಗೆ ಬಿಟ್ಟಿದ್ದು’ ಎಂದು ನಿರ್ದೇಶಕ ಜೋಗಿ ಪ್ರೇಮ್ ಅವರು ಹೇಳಿದ್ದಾರೆ. ದರ್ಶನ್ ಜೈಲಿಗೆ ಹೋಗುವುದಕ್ಕೂ ಮುನ್ನ ಅವರನ್ನು ಪ್ರೇಮ್ ಭೇಟಿ ಮಾಡಿದ್ದರು. ಆ ಕುರಿತು ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದಾರೆ. ಈ ಬಗ್ಗೆ ಪ್ರಸಾರ ಆಗುತ್ತಿರುವ ಸುದ್ದಿಗಳ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಅವರು ಮಾತನಾಡಿದ್ದಾರೆ. ‘ದರ್ಶನ್ ಸುದ್ದಿಯನ್ನು ಮಿಲಿಯನ್​​ಗಟ್ಟಲೆ ಜನರು ನೋಡುತ್ತಾರೆ. ದರ್ಶನ್​​ ಅವರಿಗೆ ನೋವಿದೆ. ಕೆಲವರದ್ದು ಸೇಡಿಸ್ಟ್ ಮನಸ್ಥಿತಿ. ದರ್ಶನ್ ಅವರ ನೋವು ನೋಡಿ ಕೆಲವರಿಗೆ ಖುಷಿ ಆಗುತ್ತದೆ. ಅಂಥವರ ಮನಸ್ಥಿತಿಯನ್ನು ದೇವರೇ ಬದಲಾಯಿಸಬೇಕು’ ಎಂದು ಜೋಗಿ ಪ್ರೇಮ್ (Jogi Prem) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.