ಪುನೀತ್ ಅವರ ಪಾರ್ಥೀವ ಶರೀರದ ಪಕ್ಕ ನಿಂತು ‘ಯುವರತ್ನ’ ಚಿತ್ರದ ನಿರ್ದೇಶಕ ಸಂತೋಷ್ ಮಗುವಿನ ಹಾಗೆ ಅತ್ತರು
‘ಯುವರತ್ನ’ ಅಲ್ಲದೆ ಪುನೀತ್ ಅಭಿನಯದ ‘ರಾಜಕುಮಾರ’ ಚಿತ್ರವನ್ನು ಸಹ ಸಂತೋಷ್ ನಿರ್ದೇಶಿಸಿದ್ದರು. ಎರಡೂ ಬಾಕ್ಸಾಫೀಸನ್ನು ಕೊಳ್ಳೆ ಹೊಡೆದ ಸಿನಿಮಾಗಳು.
ಸದಭಿರುಚಿ ಮತ್ತು ಕುಟಂಬದ ಸದಸ್ಯರೆಲ್ಲ ಒಟ್ಟಿಗೆ ಕೂತು ನೋಡಬಹುದಾದ ಚಿತ್ರಗಳನ್ನು ಮಾಡುವ ಮತ್ತು ತಮ್ಮ ಚಿತ್ರಗಳ ಮೂಲಕ ಸಮಾಜಕ್ಕೆ ಒಂದು ಸಂದೇಶವನ್ನು ನೀಡುವ ‘ಯುವರತ್ನ’ ಚಿತ್ರದ ಯುವ ನಿರ್ದೇಶಕ ಸಂತೋಷ ಆನಂದರಾಮ್ ನಿಸ್ಸಂದೇಹವಾಗಿ ಪುನೀತ್ ರಾಜ್ ಕುಮಾರ ಅವರ ಮೇಲೆ ಅಪಾರ ಪ್ರೀತಿ ಮತ್ತು ಅಭಿಮಾನವನ್ನಿಟ್ಟುಕೊಂಡಿದ್ದಾರೆ. ಶನಿವಾರ ಅವರು ತಮ್ಮ ಅಭಿಮಾನದ ನಟನ ಅಂತಿಮ ದರ್ಶನ ಪಡೆಯಲು ಕಂಠೀರವ ಸ್ಟೇಡಿಯಂ ಆಗಮಿಸಿದ ಬಳಿಕ ಅಪ್ಪು ಅವರ ಪಾರ್ಥೀವ ಶರೀರ ಪಕ್ಕ ನಿಂತು ಜೋರಾಗಿ ಅಳಲಾರಂಭಿಸಿದರು.
‘ಯುವರತ್ನ’ ಅಲ್ಲದೆ ಪುನೀತ್ ಅಭಿನಯದ ‘ರಾಜಕುಮಾರ’ ಚಿತ್ರವನ್ನು ಸಹ ಸಂತೋಷ್ ನಿರ್ದೇಶಿಸಿದ್ದರು. ಎರಡೂ ಬಾಕ್ಸಾಫೀಸನ್ನು ಕೊಳ್ಳೆ ಹೊಡೆದ ಸಿನಿಮಾಗಳು. ಸಂತೋಷ್ ಕೇವಲ ನಿರ್ದೇಶಕರಷ್ಟೇ ಅಲ್ಲ, ಸಾಹಿತಿ ಮತ್ತು ಚಿತ್ರ ಕತೆಗಾರನೂ ಆಗಿದ್ದಾರೆ.
ಅಪ್ಪು ಅವರ ಸಾವು ಅನೀರೀಕ್ಷಿತ, ಅಕಾಲಿಕ. ಅವರು ಇಷ್ಟು ಬೇಗ ಇಹಲೋಕ ತ್ಯಜಿಸುತ್ತಾರೆ ಅಂತ ಅಂದುಕೊಳ್ಳುವುದು ಸಾಧ್ಯವೇ ಇರಲಿಲ್ಲ. ಬಿಕ್ಕಿಬಿಕ್ಕಿ ಅತ್ತು ತಮ್ಮ ನೋವನ್ನು ಹೇಳಿಕೊಂಡ ಸಂತೋಷ ಶಾಕ್ಗೊಳಗಾಗಿದ್ದರು. ಅಪ್ಪುಗೆ ನಮನ ಸಲ್ಲಿಸಿದ ನಂತರ ಅವರು ಅಲ್ಲೇ ನಿಂತಿದ್ದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರನ್ನು ತಬ್ಬಿಕೊಂಡು ಅತ್ತರು. ಅವರನ್ನು ಸಮಾಧಾನಪಡಿಸಿದ ವೆಂಕಟೇಶ್ ಕಿವಿಯಲ್ಲಿ ಏನೋ ಹೇಳಿದರು.
ಇದನ್ನೂ ಓದಿ: ‘ನನಗೆ ಪುನೀತ್ ಮಾಮ ನೆನಪಾಗುತ್ತಿದ್ದಾರೆ’; ಅಪ್ಪುಗಾಗಿ ಕಣ್ಣೀರು ಹಾಕಿದ ಪುಟ್ಟ ಅಭಿಮಾನಿ, ವಿಡಿಯೋ ವೈರಲ್