‘ನನಗೆ ಪುನೀತ್ ಮಾಮ ನೆನಪಾಗುತ್ತಿದ್ದಾರೆ’; ಅಪ್ಪುಗಾಗಿ ಕಣ್ಣೀರು ಹಾಕಿದ ಪುಟ್ಟ ಅಭಿಮಾನಿ, ವಿಡಿಯೋ ವೈರಲ್​

ಕಾರ್ಕಳ ಕಲ್ಯದ ಐದು ವರ್ಷದ ದಕ್ಷ್ ಎಂಬ ಬಾಲಕ ಪುನೀತ್​ ಅವರ ದೊಡ್ಡ ಅಭಿಮಾನಿ. ಚಿಕ್ಕಂದಿನಿಂದಲೂ ಪುನೀತ್​ ಚಿತ್ರಗಳನ್ನು ಆತ ತಪ್ಪದೇ ನೋಡುತ್ತಿದ್ದ. ಆದರೆ, ಈಗ ಪುನೀತ್​ ನಿಧನ ಹೊಂದಿದ್ದಾರೆ ಎನ್ನುವ ವಿಚಾರ ಅರಗಿಸಿಕೊಳ್ಳೋಕೆ ಆತನಿಗೆ ಆಗುತ್ತಿಲ್ಲ.

‘ನನಗೆ ಪುನೀತ್ ಮಾಮ ನೆನಪಾಗುತ್ತಿದ್ದಾರೆ’; ಅಪ್ಪುಗಾಗಿ ಕಣ್ಣೀರು ಹಾಕಿದ ಪುಟ್ಟ ಅಭಿಮಾನಿ, ವಿಡಿಯೋ ವೈರಲ್​
ಬಾಲಕ ಮತ್ತು ಪುನೀತ್​
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 30, 2021 | 4:01 PM

ಪುನೀತ್ ರಾಜ್​ಕುಮಾರ್​ ಅವರನ್ನು ಕಂಡರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಫ್ಯಾಮಿಲಿ ಆಡಿಯನ್ಸ್​ ಸಿನಿಮಾ ಮೂಲಕ ಪುನೀತ್​ ಹೆಚ್ಚು ಗುರುತಿಸಿಕೊಂಡಿದ್ದಾರೆ. ಚಿಕ್ಕವರಿಂದ ಹಿಡಿದು ವಯಸ್ಸಾದ ವ್ಯಕ್ತಿಗಳಿಗೂ ಪುನೀತ್​ ಇಷ್ಟವಾಗುತ್ತಾರೆ. ಸಿನಿಮಾಗಳ ಜತೆಗೆ ಅವರು ಮಾಡಿದ ಸಾಮಾಜಿಕ ಕೆಲಸಗಳು ಕೂಡ ಎಲ್ಲರ ಗಮನ ಸೆಳೆದಿದೆ. ಈ ಕಾರಣಕ್ಕೆ ಅವರನ್ನು ಕಳೆದುಕೊಂಡಿದ್ದು ಇಡೀ ಚಿತ್ರರಂಗಕ್ಕೆ ಸಿಡಿಲು ಬಡಿದಂತಾಗಿದೆ. ಈ ಮಧ್ಯೆ ಪುನೀತ್​ಗಾಗಿ ಪುಟ್ಟ ಅಭಿಮಾನಿಯೋರ್ವ ಕಣ್ಣೀರು ಹಾಕಿದ್ದಾನೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಾರ್ಕಳ ಕಲ್ಯದ ಐದು ವರ್ಷದ ದಕ್ಷ್ ಎಂಬ ಬಾಲಕ ಪುನೀತ್​ ಅವರ ದೊಡ್ಡ ಅಭಿಮಾನಿ. ಚಿಕ್ಕಂದಿನಿಂದಲೂ ಪುನೀತ್​ ಚಿತ್ರಗಳನ್ನು ಆತ ತಪ್ಪದೇ ನೋಡುತ್ತಿದ್ದ. ಆದರೆ, ಈಗ ಪುನೀತ್​ ನಿಧನ ಹೊಂದಿದ್ದಾರೆ ಎನ್ನುವ ವಿಚಾರ ಅರಗಿಸಿಕೊಳ್ಳೋಕೆ ಆತನಿಗೆ ಆಗುತ್ತಿಲ್ಲ. ಈ ಕಾರಣಕ್ಕೆ ದಕ್ಷ್​ ಒಂದೇ ಸಮನೆ ಅಳುತ್ತಿದ್ದಾನೆ.

ಮಗು ಮತ್ತು ಆತನ ತಾಯಿ ತುಳುವಿನಲ್ಲಿ  ಸಂಭಾಷಣೆ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದೆ. ‘ನನಗೆ ಪುನೀತ್ ಮಾಮ ನೆನಪಾಗುತ್ತಿದ್ದಾರೆ. ನನಗೆ ಅವರನ್ನು ಮರೆಯಲು ಆಗುತ್ತಿಲ್ಲ. ನನಗೆ ಅವರು ಬೇಕು.  ಅವರೇ ನನ್ನ ಕಣ್ಣ ಮುಂದೆ ಬರುತ್ತಿದ್ದಾರೆ’ ಎಂದು ಅಳುತ್ತಾ ಒಂದೇ ಸಮನೆ ಹಠ ಹಿಡಿದಿದ್ದಾನೆ ಬಾಲಕ. ‘ಅವರು ತೀರಿಕೊಂಡಿಲ್ಲ. ಸಿನಿಮಾದಲ್ಲಿ ಹಾಗೆ ತೋರಿಸಿದ್ದಾರೆ’ ಎಂದು ತಾಯಿ ಸಂತೈಸುವ ಕೆಲಸ ಮಾಡಿದ್ದಾರೆ.

ಪುನೀತ್​ ನಿಧನದ ಸುದ್ದಿ ಕೇಳಿ ಅಭಿಮಾನಿಯೋರ್ವ ಶುಕ್ರವಾರ (ಅಕ್ಟೋಬರ್​ 30) ಮೃತಪಟ್ಟಿದ್ದ.  ಪುನೀತ್​ ಸಾವಿನ ಸುದ್ದಿ ಕೇಳುತ್ತಿದ್ದಂತೆ ಮುನಿಯಪ್ಪ(30) ಎಂಬ ಅಭಿಮಾನಿಗೆ ಹೃದಯಾಘಾತ ಆಗಿತ್ತು. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮರೂರು ಗ್ರಾಮದ ಮುನಿಯಪ್ಪ ಪುನೀತ್​ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಪುನೀತ್​ ಜತೆ ಅವರ ಅಭಿಮಾನಿಯೂ ಮೃತಪಟ್ಟಿದ್ದು ದುರದೃಷ್ಟಕರ.

ಇದನ್ನೂ ಓದಿ: ‘ಪುನೀತ್ ಜಿಮ್​ಗೆ ತೆರಳಿರಲಿಲ್ಲ’; ಮೃತಪಡುವುದಕ್ಕೂ ಮೊದಲು ನಡೆದಿದ್ದೇನು? ಕಣ್ಣೀರಿಡುತ್ತಲೇ ವಿವರಿಸಿದ ಅಪ್ಪು ಅಂಗರಕ್ಷಕ

‘ಆ ದೃಶ್ಯ ಇನ್ನೂ ನನ್ನನ್ನು ಕಾಡುತ್ತಿದೆ’; ಪುನೀತ್​ ರಾಜ್​ಕುಮಾರ್​ಗೆ ಸುದೀಪ್​ ಭಾವುಕ ನುಡಿ ನಮನ

Published On - 4:00 pm, Sat, 30 October 21

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ