ಸಿನಿಮಾ ಸೆಟ್​​ನಲ್ಲಿ ಹೇಗಿರುತ್ತಿದ್ದರು ಚಂದನ್-ನಿವೇದಿತಾ: ನಿರ್ದೇಶಕ ಮಾತು

ಸಿನಿಮಾ ಸೆಟ್​​ನಲ್ಲಿ ಹೇಗಿರುತ್ತಿದ್ದರು ಚಂದನ್-ನಿವೇದಿತಾ: ನಿರ್ದೇಶಕ ಮಾತು

ಮಂಜುನಾಥ ಸಿ.
|

Updated on:Jun 09, 2024 | 4:10 PM

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಇಬ್ಬರು ಪತಿ-ಪತ್ನಿಯಾಗಿ ನಟಿಸುತ್ತಿರುವ ‘ಕ್ಯಾಂಡಿಕ್ರಶ್’ ಸಿನಿಮಾದ ಚಿತ್ರೀಕರಣ ಇನ್ನೂ ಚಾಲ್ತಿಯಲ್ಲಿದೆ. ಈ ಸಿನಿಮಾದ ನಿರ್ದೇಶಕ ಪುನೀತ್, ಚಂದನ್ ಹಾಗೂ ನಿವೇದಿತಾ ಸಿನಿಮಾ ಸೆಟ್​ನಲ್ಲಿ ಹೇಗಿರುತ್ತಿದ್ದರು ಎಂಬ ಬಗ್ಗೆ ಮಾತನಾಡಿದ್ದಾರೆ.

ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಇಬ್ಬರು ಒಟ್ಟಿಗೆ ‘ಕ್ಯಾಂಡಿ ಕ್ರಶ್’ ಹೆಸರಿನ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿಯೂ ಇವರಿಬ್ಬರದ್ದು ಪತಿ-ಪತ್ನಿ ಪಾತ್ರ. ಸಿನಿಮಾದ ಚಿತ್ರೀಕರಣ ಇನ್ನೂ ಚಾಲ್ತಿಯಲ್ಲಿದೆ. ಸಿನಿಮಾದ ನಿರ್ದೇಶಕರು ಹೇಳಿರುವಂತೆ ಇನ್ನೂ ಸುಮಾರು ಒಂದು ವಾರದ ಚಿತ್ರೀಕರಣ ಇಬ್ಬರದ್ದೂ ಬಾಕಿಯಿದೆ. ಇಬ್ಬರೂ ಒಟ್ಟಾಗಿಯೇ ಸಿನಿಮಾದಲ್ಲಿ ನಟಿಸಬೇಕಿದೆ. ಸಿನಿಮಾ ಸೆಟ್​ನಲ್ಲಿ ಈ ಜೋಡಿ ಹೇಗಿರುತ್ತಿತ್ತು, ವಿಚ್ಛೇದನದ ಕುರುಹುಗಳೇನಾದರೂ ಚಿತ್ರತಂಡಕ್ಕೆ ಸಿಕ್ಕಿತ್ತಾ ಎಂಬ ಬಗ್ಗೆ ‘ಕ್ಯಾಂಡಿಕ್ರಶ್’ ಸಿನಿಮಾದ ನಿರ್ದೇಶಕ ಪುನೀತ್ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದು, ಸೆಟ್​ನಲ್ಲಿ ಪರಸ್ಪರರ ಬಗ್ಗೆ ಬಹಳ ಕೇರಿಂಗ್ ಆಗಿ ಇಬ್ಬರೂ ಇರುತ್ತಿದ್ದರು. ಜಾಲಿಯಾಗಿ ಇರುತ್ತಿದ್ದರು. ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಅನುಮಾನ ಸಹ ಯಾರಿಗೂ ಬಂದಿರಲಿಲ್ಲ. ಅದಕ್ಕೆ ಆಸ್ಪದವೂ ಇರಲಿಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 09, 2024 04:09 PM