‘ಪುನೀತ್ ನನ್ನ ಮಗು ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’ ಎಂದಿದ್ದರು ಬಿ. ಸರೋಜಾದೇವಿ
ಪುನೀತ್ ರಾಜ್ಕುಮಾರ್, ಸರೋಜಾದೇವಿ, ಡಾ. ರಾಜ್ಕುಮಾರ್ ಅಭಿನಯದ ‘ಯಾರಿವನು’ ಚಿತ್ರಕ್ಕೆ ದೊರೆ-ಭಗವಾನ್ ನಿರ್ದೇಶನ ಮಾಡಿದ್ದರು. ಆಗಿನ ಘಟನೆಗಳನ್ನು ಭಗವಾನ್ ನೆನಪಿಸಿಕೊಂಡಿದ್ದಾರೆ.
ಡಾ. ರಾಜ್ಕುಮಾರ್ ಕುಟುಂಬದ ಜೊತೆ ನಿರ್ದೇಶಕ ದೊರೆ ಭಗವಾನ್ ಅವರಿಗೆ ಮೊದಲಿನಿಂದಲೂ ಹೆಚ್ಚು ಒಡನಾಟ ಇದೆ. ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಮಗು ಆಗಿದ್ದಾಗಿನಿಂದಲೂ ಕಂಡವರು ಭಗವಾನ್. ಪುನೀತ್ ನಟಿಸಿದ ‘ಯಾರಿವನು’ ಸಿನಿಮಾಗೆ ಭಗವಾನ್ (Director S K Bhagavan) ನಿರ್ದೇಶನ ಮಾಡಿದ್ದರು. ಆ ಕುರಿತು ಅವರೀಗ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಆ ಚಿತ್ರದಲ್ಲಿ ಪುನೀತ್ ತುಂಬ ಚೆನ್ನಾಗಿ ನಟಿಸಿದ್ದ. ಶ್ರೀನಾಥ್ ಜೊತೆ ಇರುವಾಗ ಶ್ರೀನಾಥ್ ಮಗನಂತೆ, ರಾಜ್ಕುಮಾರ್ ಜೊತೆ ಇರುವಾಗ ರಾಜ್ಕುಮಾರ್ ಮಗನಂತೆ ಅಭಿನಯಿಸಿದ್ದ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಈ ರೀತಿ ಯಾವುದೇ ಕಲಾವಿದ ನಟಿಸಿದಾಗ ಎಷ್ಟು ಖುಷಿ ಆಗುತ್ತದೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ಆ ಸಿನಿಮಾದ ಒಂದು ದೃಶ್ಯದಲ್ಲಿ ಪುನೀತ್ ನಟಿಸಿದ್ದನ್ನು ನೋಡಿ ಖುಷಿಯಾದ ಬಿ. ಸರೋಜಾದೇವಿ (B Saroja Devi) ಅವರು ‘ಈ ಮಗು ನನ್ನ ಮಗವೇ ಆಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು’ ಅಂತ ಹೇಳಿದ್ದರು. ಆಕೆ ಏಳು ಭಾಷೆಯ ತಾರೆ. ಅಂಥವರ ಜೊತೆ ಅಪ್ಪು ನಟಿಸಿದ್ದ’ ಎಂದು ಆ ದಿನಗಳನ್ನು ಭಗವಾನ್ ಮೆಲುಕು ಹಾಕಿದ್ದಾರೆ. ‘ಯಾರಿವನು’ ಸಿನಿಮಾ ತಯಾರಾಗಿದ್ದು ಹೇಗೆ? ಆ ಸಂದರ್ಭದಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.
ಇದನ್ನೂ ಓದಿ:
ಸೈನಿಕನ ಗೆಟಪ್ನಲ್ಲಿ ಆಹಾ ಎಷ್ಟು ಚಂದ ಪುನೀತ್; ಇಲ್ಲಿವೆ ‘ಜೇಮ್ಸ್’ ಸಿನಿಮಾದ ಫೋಟೋಗಳು
‘ಸಲಾಂ ಸೋಲ್ಜರ್’ ಹಾಡು ರಿಲೀಸ್ ಮಾಡಿ, ಪುನೀತ್ಗೆ ಸರಿಸಾಟಿ ಯಾರೂ ಇಲ್ಲ ಎಂದ ಕಿಚ್ಚ ಸುದೀಪ್