ಶಿಷ್ಯ ವಿನೋದ್ ದೋಂಡಾಳೆ ನಿಧನ, ಭಾವುಕರಾದ ಟಿಎನ್ ಸೀತಾರಾಂ

ಶಿಷ್ಯ ವಿನೋದ್ ದೋಂಡಾಳೆ ನಿಧನ, ಭಾವುಕರಾದ ಟಿಎನ್ ಸೀತಾರಾಂ

ಮಂಜುನಾಥ ಸಿ.
|

Updated on:Jul 20, 2024 | 9:38 PM

ಸಿನಿಮಾ ಹಾಗೂ ಕಿರುತೆರೆಗಳಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ವಿನೋದ್ ದೋಂಡಾಳೆ ಇಂದು (ಜುಲೈ 20) ನಿಧನ ಹೊಂದಿದ್ದಾರೆ. ಅವರು ಹಲವು ವರ್ಷಗಳ ಕಾಲ ನಿರ್ದೇಶಕ ಟಿಎನ್ ಸೀತಾರಾಮ್ ಶಿಷ್ಯರಾಗಿದ್ದರು. ಇದೀಗ ತಮ್ಮ ಶಿಷ್ಯನ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ ಟಿಎನ್​ಎಸ್.

ಸಿನಿಮಾ ಹಾಗೂ ಕಿರುತೆರೆಗಳಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ವಿನೋದ್ ದೋಂಡಾಳೆ ಇಂದು (ಜುಲೈ 20) ನಿಧನ ಹೊಂದಿದ್ದಾರೆ. ವಿನೋದ್ ದೋಂಡಾಳೆ ಸ್ವತಂತ್ರ್ಯ ನಿರ್ದೇಶಕರಾಗುವ ಮುನ್ನ ಹಿರಿಯ ನಿರ್ದೇಶಕರಾದ ಪಿ ಶೇಷಾದ್ರಿ ಹಾಗೂ ಟಿಎನ್ ಸೀತಾರಾಂ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದರು. ಶಿಷ್ಯನ ಅಗಲಿಕೆಯ ಮಾಹಿತಿ ತಿಳಿಯುತ್ತಿದ್ದಂತೆ ಇಬ್ಬರೂ ಸಹ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಬೇಸರ ತೋಡಿಕೊಂಡಿದ್ದರು. ಬಳಿಕ ಮಾಧ್ಯಮಗಳ ಬಳಿ ಶಿಷ್ಯನ ಬಗ್ಗೆ ಮಾತನಾಡಿದ ಟಿಎನ್ ಸೀತಾರಾಂ, ವಿನೋದ್​ರ ವ್ಯಕ್ತಿತ್ವದ ಬಗ್ಗೆ ಅವರಿಗಿದ್ದ ಪ್ರತಿಭೆ, ಸಿನಿಮಾ ಪ್ರೀತಿ ಏಳು ವರ್ಷ ತಮ್ಮ ಸಹಾಯಕನಾಗಿ ಕೆಲಸ ಮಾಡಿದಾಗಿನ ಒಡನಾಟ, ಬಾಂಧವ್ಯದ ಬಗ್ಗೆ ಮಾತನಾಡುತ್ತಾ ಭಾವುಕರಾಗಿಬಿಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 20, 2024 09:38 PM