ತುಕಾಲಿ ಸಂತೋಶ್ ಬಹಳ ಕಾಟ ಕೊಟ್ಟ, ಸಿನಿಮಾದಿಂದ ತೆಗೆದೆ: ನಿರ್ದೇಶಕ ಯತಿರಾಜ್

ತುಕಾಲಿ ಸಂತೋಶ್ ಬಹಳ ಕಾಟ ಕೊಟ್ಟ, ಸಿನಿಮಾದಿಂದ ತೆಗೆದೆ: ನಿರ್ದೇಶಕ ಯತಿರಾಜ್

ಮಂಜುನಾಥ ಸಿ.
|

Updated on: Oct 16, 2023 | 10:47 PM

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10ರ ಮನೆಯಲ್ಲಿ ತುಕಾಲಿ ಸಂತೋಶ್ ಹಲವು ಸ್ಪರ್ಧಿಗಳ ಬೇಸರಕ್ಕೆ ಕಾರಣವಾಗಿದ್ದಾರೆ. ಸುದೀಪ್ ಸಹ ತುಕಾಲಿಯ ವರ್ತನೆಯನ್ನು ಸೂಚ್ಯವಾಗಿ ಟೀಕಿಸಿದ್ದಾರೆ. ಇದರ ನಡುವೆ ನಿರ್ದೇಶಕರೊಬ್ಬರು ಅಶಿಸ್ತಿನಿಂದಾಗಿ ತುಕಾಲಿ ಸಂತೋಶ್ ಅನ್ನು ತಮ್ಮ ಸಿನಿಮಾದಿಂದ ತೆಗೆದಿದ್ದಾಗಿ ಹೇಳಿಕೊಂಡಿದ್ದಾರೆ.

ಬಿಗ್​ಬಾಸ್ (Bigg Boss) ಕನ್ನಡ ಸೀಸನ್ 10 ರ ಮೊದಲ ವಾರಾಂತ್ಯದ ಪಂಚಾಯಿತಿಯಲ್ಲಿ ನಟ ಸುದೀಪ್ ಹಾಗೂ ಮನೆಯ ಕೆಲ ಸ್ಪರ್ಧಿಗಳು ತುಕಾಲಿ ಸಂತೋಶ್ ವ್ಯಕ್ತಿತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತುಕಾಲಿ ಸಂತೋಶ್, ಡ್ರೋನ್ ಪ್ರತಾಪ್ ಹಾಗೂ ಇತರೆ ಕೆಲವರ ಬಗ್ಗೆ ಕೆಟ್ಟದಾಗಿ ವ್ಯಂಗ್ಯ ಮಾಡಿದ್ದನ್ನು ಸುದೀಪ್ ಸೂಚ್ಯವಾಗಿ ಟೀಕಿಸಿದರು. ಮನೆಯ ಕೆಲವು ಸದಸ್ಯರು ಸಹ ತುಕಾಲಿ ಸಂತೋಶ್​ರ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಬಿಗ್​ಬಾಸ್ ಮನೆಯ ಹೊರಗೆ ಸಿನಿಮಾ ನಿರ್ದೇಶಕ ಯತಿರಾಜ್ ಅವರು ತಾವು ತಮ್ಮ ಸಿನಿಮಾದಿಂದ ತುಕಾಲಿ ಸಂತೋಶ್ ಅನ್ನು ಹೊರಹಾಕಿದ್ದಾಗಿ ಹೇಳಿದ್ದಾರೆ. ತುಕಾಲಿ ಸಂತೋಶ್ ಬಹಳ ಅಶಿಸ್ತು ತೋರಿಸಿದ ಕಾರಣ ಅವರನ್ನು ಹೊರಗೆ ಹಾಕಿದ್ದಾಗಿ ಯತಿರಾಜ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ