ಹಾಸನ: ಸಾಮಾನ್ಯ ಸಭೆ ವೇಳೆ ಶಾಸಕ ಹೆಚ್ಪಿ ಸ್ವರೂಪ್ ಪ್ರಕಾಶ್ಗೆ ಕರೆಂಟ್ ಶಾಕ್
ರಾಜ್ಯದಲ್ಲಿ ಸದ್ಯ ಲೋಡ್ ಶೆಡ್ಡಿಂಗ್ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಲವೆಡೆ ರಾಜಕೀಯ ಪಕ್ಷಗಳ ಸಭೆ ನಡೆಯುವಾಗ ವಿದ್ಯುತ್ ಕೈ ಕೊಟ್ಟ ಉದಾಹರಣೆಗಳಿವೆ. ಆದರೆ ಸದ್ಯ ಹಾಸನ ನಗರಸಭೆ ಸಾಮಾನ್ಯ ಸಭೆ ವೇದಿಕೆ ಮೇಲಿದ್ದ ಟೇಬಲ್ ಮೈಕ್ ಮುಟ್ಟಿದಾಗ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ.
ಹಾಸನ, ಅಕ್ಟೋಬರ್ 16: ರಾಜ್ಯದಲ್ಲಿ ಸದ್ಯ ಲೋಡ್ ಶೆಡ್ಡಿಂಗ್ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಕೂಡ ಉಂಟಾಗಿತ್ತಿದೆ. ಕೆಲವೆಡೆ ರಾಜಕೀಯ ಪಕ್ಷಗಳ ಸಭೆ ನಡೆಯುವಾಗ ವಿದ್ಯುತ್ ಕೈ ಕೊಟ್ಟ ಉದಾಹರಣೆಗಳಿವೆ. ಆದರೆ ಸದ್ಯ ಶಾಸಕರೊಬ್ಬರಿಗೆ ಕರೆಂಟ್ ಶಾಕ್ (power shock) ಹೊಡೆದಿದೆ. ಹೌದು ಹಾಸನ ನಗರಸಭೆ ಸಾಮಾನ್ಯ ಸಭೆ ವೇದಿಕೆ ಮೇಲಿದ್ದ ಟೇಬಲ್ ಮೈಕ್ ಮುಟ್ಟಿದಾಗ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಾಸನ ನಗರಸಭೆ ಕುವೆಂಪು ಸಭಾಂಗಣದಲ್ಲಿ ಘಟನೆ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos