ಓವರ್‌ಟೇಕ್ ಮಾಡಿದ್ದಕ್ಕೆ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ಅಮ್ಮ!
ತಾಯಿ ಬೇಡಿಕೊಳ್ಳುತ್ತಿದ್ದರೂ ಸುಮ್ಮನಾಗದೆ ಯುವಕನಿಗೆ ಗುಂಪೊಂದು ಥಳಿಸುತ್ತಿರುವ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. ಆಕಾಶ್ ಎಂಬ ಯುವಕ ವಾಹನವನ್ನು ಓವರ್ ಟೇಕ್ ಮಾಡುವ ವಿಚಾರವಾಗಿ ಮಾರ್ಗಮಧ್ಯೆ ಕೆಲವರೊಂದಿಗೆ ವಾಗ್ವಾದ ನಡೆಸಿದ್ದಾನೆ. ಅಷ್ಟರಲ್ಲಿ ಜನರು ಆತನನ್ನು ಥಳಿಸಲು ಆರಂಭಿಸಿದ್ದಾರೆ. ಅಡ್ಡ ಬಂದ ಆತನ ಅಪ್ಪ-ಅಮ್ಮನಿಗೂ ಹೊಡೆದಿದ್ದಾರೆ. ಈ ಹಲ್ಲೆಯ ನಂತರ ಆಕಾಶ್ ಸಾವನ್ನಪ್ಪಿದ್ದಾರೆ.
ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಓವರ್ ಟೇಕ್ ಮಾಡಿದ ಎಂಬ ಕಾರಣಕ್ಕೆ ನಡುರಸ್ತೆಯಲ್ಲೇ ಯುವಕನಿಗೆ ಮನಬಂದಂತೆ ಥಳಿಸಲಾಗಿದೆ. ತನ್ನ ಮಗನಿಗೆ ಏನೂ ಮಾಡಬೇಡಿ ಎಂದು ಆ ಯುವಕನ ಮೇಲೆ ಮಲಗಿ, ಆತನಿಗೆ ಹೊಡೆತ ಬೀಳದಂತೆ ತಾಯಿ ಪ್ರಯತ್ನಿಸುತ್ತಿದ್ದಾರೆ. ಮಗನಿಗೆ ಹೊಡೆಯುತ್ತಿದ್ದವರಿಗೆ ಕೈ ಮುಗಿದು ತಾಯಿ ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಭಾರೀ ಹೊಡೆತದಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿರುವ ಅಮಾನವೀಯ ಘಟನೆ ನಡೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us